ಕುಂಬಳೆ : ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿಗಳ ಎರಡು ತಂಡಗಳ ನಡುವಿನ ಹೊಡೆದಾಟ ಮತ್ತೆ ಮುಂದುವರಿದೆ. ಶಾಲೆಯ 9ಹಾಗೂ 10ನೇ ತರಗತಿ ವಿದ್ಯಾರ್ಥಿಗಳ ಎರಡು ತಂಡಗಳು ಪೇಟೆಯಲ್ಲಿ ಬುಧವಾರ ಸಂಜೆ ಹೊಡೆದಾಡಿಕೊಂಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ವಿದ್ಯಾರ್ಥಿಗಳನ್ನು ಚದುರಿಸಿದ್ದಾರೆ. ಶಾಲಾ ಕಲೋತ್ಸವ ಅಂಗವಾಗಿ ನಡೆದ ಕ್ರೀಡಾಕೂಟ ಮುಗಿದು ತೆರಳುವ ಮಧ್ಯೆ ಹೊಡೆದಾಟ ನಡೆದಿದೆ.
ಶಾಲೆಯಲ್ಲಿ ಶೈಕ್ಷಣಿಕ ವರ್ಷಾರಂಭದಿಂದಲೂ ವಿದ್ಯಾರ್ಥಿಗಳ ನಡುವೆ ಪರಸ್ಪರ ವಾಗ್ವಾದ, ಹೊಡೆದಾಟ ನಡೆದುಬರುತ್ತಿದ್ದು, ಈ ಬಗ್ಗೆ ಇಬ್ಬರನ್ನು ಶಾಲೆಯಿಂದ ಡಿಬಾರ್ ಮಾಡಲಾಗಿದ್ದರೆ, ಇತರ ನಾಲ್ವರನ್ನು ಅಮಾನತುಗೊಳಿಸಲಾಗಿತ್ತು. ಅಮಾನತುಗೊಳಿಸಿರುವ ವಿದ್ಯಾರ್ಥಿಗಳನ್ನು ಮತ್ತೆ ಶಾಲೆಗೆ ಸೇರ್ಪಡೆಗೊಳಿಸುವಂತೆ ಹಾಗೂ ಅವರಿಂದ ಮುಂದೆ ಯಾವುದೇ ತಪ್ಪು ನಡೆಯದಂತೆ ನೋಡಿಕೊಳ್ಳುವುದಾಗಿ ವಿದ್ಯಾರ್ಥಿಗಳ ಹೆತ್ತವರು ಶಾಲೆಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿ ತಂಡಗಳ ನಡುವೆ ಮುಂದುವರಿಯುತ್ತಿರುವ ಹೊಡೆದಾಟ ಪ್ರಕರಣ ಹಾಗೂ ಅಮಾನತುಗೊಂಡಿರುವ ವಿದ್ಯಾರ್ಥಿಗಳನ್ನು ಶಾಲೆಗೆ ಮರುಸೇರ್ಪಡೆಗೊಳಿಸುವ ಬಗ್ಗೆ ತುರ್ತು ಸಭೆ ನಡೆಸುವುದಾಗಿ ಪಿಟಿಎ ಅಧ್ಯಕ್ಷ ಅಹಮ್ಮದಾಲಿ ತಿಳಿಸಿದ್ದಾರೆ.
ಕುಂಬಳೆ ಶಾಲೆಯಲ್ಲಿ ವಿದ್ಯಾರ್ಥಿಗಳ ಮಧ್ಯೆ ಮತ್ತೆ ಹೊಡೆದಾಟ-ಚದುರಿಸಿದ ಪೊಲೀಸರು
0
ಅಕ್ಟೋಬರ್ 13, 2022
Tags