ಬದಿಯಡ್ಕ: ಕಾಸರಗೋಡು ಜಿಲ್ಲಾ ಮೊಗೇರ ಸಂಘದ ಬೆಳ್ಳಿಹಬ್ಬದ ಸಲುವಾಗಿ ಇತ್ತೀಚೆಗೆ ಬದಿಯಡ್ಕ ಬೋಳುಕಟ್ಟೆ ಮಿನಿ ಸ್ಟೇಡಿಯಂನಲ್ಲಿ ಬೊಳ್ಳಿಪರ್ಬ ಮೊಗೇರ ಟ್ರೋಫಿ ಕ್ರಿಕೆಟ್ ಪಂದ್ಯಾಟವನ್ನು ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತ ಬಾರಡ್ಕ ಉದ್ಘಾಟಿಸಿದರು. ಕಾರ್ಯಕ್ರಮ ದಲ್ಲಿ ಜಿಲ್ಲಾ ಅಧ್ಯಕ್ಷ ರಾಮಪ್ಪ ಮಂಜೇಶ್ವರ ಅಧ್ಯಕ್ಷತೆ ವಹಿಸಿದರು.
ಕೇರಳ ರಾಜ್ಯ ಮೊಗೇರ ಸಂಘದ ಅಧ್ಯಕ್ಷ ಅಂಗಾರ ಅಜಕೋಡು, ಕಾರ್ಯದರ್ಶಿ ಹರಿಶ್ಚಂದ್ರ ಪುತ್ತಿಗೆ, ಉಪಾಧ್ಯಕ್ಷ ಗೋಪಾಲ ದರ್ಬೆತಡ್ಕ, ಸಂಚಾಲಕ ರವಿಕಾಂತ ಕೇಸರಿ ಕಡಾರ್, ಜೊತೆಕಾರ್ಯದರ್ಶಿ ಸುಂದರ ಸುದೆಂಬಳ, ಸದಸ್ಯರಾದ ಜಯರಾಮಪ್ಪ, ಸುಂದರಿ ಟೀಚರ್, ಸಂಘಟನಾ ಕಾರ್ಯದರ್ಶಿ ಸುಧಾಕರ ಬೆಳ್ಳಿಗೆ, ಜಿಲ್ಲಾ ಸದಸ್ಯರಾದ ರಾಮ ಪಟ್ಟಾಜೆ, ನಿಟ್ಟೋಣಿ ಬಂದ್ಯೋಡ್, ರವಿಚಂದ್ರ ಕನ್ನಟ್ಟಿಪಾರೆ, ತುಕ್ರ ಪೆರಿಯಡ್ಕ, ಗಂಗಾಧರ ಗೊಳಿಯಡ್ಕ ಅಧ್ಯಕ್ಷರು ಪರಿಶಿಷ್ಟ ಜಾತಿ ಸೇವಾ ಸಹಕಾರಿ ಸಂಘ ಬದಿಯಡ್ಕ ಮತ್ತು ಐತಪ್ಪ ಚೆನ್ನೆಗುಳಿ ನಿರ್ದೇಶಕರು ಎಸ್ ಸಿ ಸಹಕಾರಿ ಸಂಘ ಬದಿಯಡ್ಕ, ಮೋಹನ್ ದರ್ಬೆತಡ್ಕ ಉಪಸ್ಥಿತರಿದ್ದರು.
ಬೊಳ್ಳಿಪರ್ಬ ಮೊಗೇರ ಟ್ರೋಫಿ ಕ್ರಿಕೆಟ್ ಪಂದ್ಯಾಟ
0
ಅಕ್ಟೋಬರ್ 21, 2022
Tags