ಅಖಿಲ ಭಾರತ ಅಂಚೆ ನೌಕರರ ಸಂಘ ಜಿಡಿಎಸ್ (ಎನ್‍ಎಫ್‍ಪಿಇ) ಅಖಿಲ ಭಾರತ ಸಮ್ಮೇಳನವು ಕಾಸರಗೋಡಿನಲ್ಲಿ ಜರುಗಿತು. ಸಿಐಟಿಯು ಅಖಿಲ ಭಾರತ ಉಪಾಧ್ಯಕ್ಷ ಎ.ಕೆ.ಪದ್ಮನಾಭನ್ ಸಮ್ಮೇಳನ ಉದ್ಘಾಟಿಸಿದರು. ಅಖಿಲ ಭಾರತ ಅಧ್ಯಕ್ಷ ವೀರೇಂದ್ರ ಶರ್ಮಾ ಅಧ್ಯಕ್ಷತೆ ವಹಿಸಿದ್ದರು. ಆರ್. ಎನ್. ಪರಕಾರ್, ಜನಾರ್ದನ್ ಮಜೀಂದಾರ್, ಪಿ.ವಿ.ರಾಜೇಂದ್ರನ್, ಪಿಸಿ ಪಿಳ್ಳೈ, ಕೆ. ರಾಘವೇಂದ್ರನ್, ಕೆ.ವಿ.ಶ್ರೀಧರ್, ಡಿ.ವಿ.ಮೊಹಂತಿ, ಪಿ.ಕೆ.ಮುರಳೀಧರನ್, ಪಿ.ಯು.ಗಡ್ಸೆ, ವಿ. ಶ್ರೀಕುಮಾರ್, ಕೆ. ಶ್ರೀನಿವಾಸ, ಪಿ. ಪಾಂಡುರಂಗರಾವ್ ಉಪಸ್ಥಿತರಿದ್ದರು.
ಈ ಸಂದರ್ಭ ನಡೆದ ಸಾರ್ವಜನಿಕ ಸಭೆಯನ್ನು ನಗರಸಭಾಂಗಣದ ತೆರೆದ ಸಭಾಂಗಣದಲ್ಲಿ ಸಚಿವ ಪಿ.ಎ. ಮುಹಮ್ಮದ್ ರಿಯಾಜ್ ಉದ್ಘಾಟಿಸುವರು. ಸಮ್ಮೇಳನದ ಅಂಗವಾಗಿ ನಗರದಲ್ಲಿ ಪ್ರಾತ್ಯಕ್ಷಿಕೆ, ಅಲೋಶಿ ಮತ್ತು ತಂಡದವರಿಂದ ಗಜಲ್ ಸೇರಿದಂತೆ ವಿವಿಧ ಕಲಾ ಕಾರ್ಯಕ್ರಮ ಜರುಗಿತು.
ಎನ್‍ಎಫ್‍ಪಿಇ ರಾಜ್ಯ ಅಧ್ಯಕ್ಷ ಹಾಗೂ ಮಾಜಿ ಸಂಸದ ಪಿ. ಕರುಣಾಕರನ್ ಧ್ವಜಾರೋಹಣ ನಡೆಸಿದರು. ಟಿ.ಕೆ.ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಸಂಚಾಲಕ ಪಿ.ವಿ.ರಾಜೇಂದ್ರನ್, ಪಾಂಡುರಂಗ ರಾವ್, ಎಂ. ಕುಮಾರನ್ ನಂಬಿಯಾರ್, ಗೋಪಾಲಕೃಷ್ಣನ್ ನಾಯರ್, ಪಿ.ಕೆ.ಮುರಳೀಧರನ್, ಲಾಲನ್ ಮತ್ತು ಮೋಹನನ್ ಉಪಸ್ಥಿತರಿದ್ದರು. ಪುರಭವನದಲ್ಲಿ ನಡೆದ ಛಾಯಾಚಿತ್ರ ಪ್ರದರ್ಶನವನ್ನು ಮಾಜಿ ಶಾಸಕ ಕೆ.ಪಿ.ಸತೀಶ್ ಚಂದ್ರನ್ ಉದ್ಘಾಟಿಸಿದರು. ಸಾಬು ಅಬ್ರಹಾಂ ಅಧ್ಯಕ್ಷತೆ ವಹಿಸಿದ್ದರು.
ಅಖಿಲ ಭಾರತ ಅಂಚೆ ನೌಕರರ ಸಂಘ: ಅಖಿಲ ಭಾರತ ಸಮ್ಮೇಳನ
0
ಅಕ್ಟೋಬರ್ 09, 2022