ಕಾಸರಗೋಡು: ಪ್ರಪಂಚದ ಸಕಲ ಜೀವಜಾಲಗಳು ನೆಮ್ಮದಿಯ ಜೀವನ ಸಾಗಿಸುವಂತಾದಾಗ ಮಾತ್ರ ಮಾನವಸಂಕುಲ ದೀರ್ಘ ಕಾಲ ಅಸ್ತಿತ್ವದಲ್ಲಿರಲು ಸಾಧ್ಯ ಎಂದು ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ಮುಖ್ಯ ಶಿಕ್ಷಕ ಬಿ. ರಾಜೇಂದ್ರ ತಿಳಿಸಿದ್ದಾರೆ. ಅವರು ಶಾಲಾ ಎಸ್.ಎನ್ ನೇಚರ್ ಕ್ಲಬ್ ವತಿಯಿಂದ ಆಯೋಜಿಸಲಾದ ವನ್ಯಜೀವಿ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪರಿಸರದ ಮೇಲಿನ ದಬ್ಬಾಳಿಕೆ, ಅನಧಿಕೃತ ಹಸ್ತಕ್ಷೇಪಗಳಿಂದ ಪ್ರಾಕೃತಿಕ ವಿಕೋಪಗಳಿಗೆ ಕಾರಣವಾಗುತ್ತಿದೆ. ಇದು ಸಮಸ್ತೆ ಜೀವಜಾಲಗಳಿಗೆ ಆಪತ್ತು ತಂದೊಡ್ಡುತ್ತಿರುವುದಾಗಿ ತಿಳಿಸಿದರು.
ಶಿಕ್ಷಕ, ಎಸ್.ಎನ್ ನೇಚರ್ ಕ್ಲಬ್ ಸಂಚಾಲಕ ಉಮೇಶ್ ಕೆ. ಪೆರ್ಲ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕರಾದ ರಾಧಾಕೃಷ್ಣ ಭಟ್ ಹಾಗೂ ಪ್ರವೀಣ್ ಅವರು ಸಹ ಜೀವಿಗಳೊಂದಿಗಿನ ಸ್ನೇಹ ಮತ್ತು ಪರಿಸರ ಸಂರಕ್ಷಣೆಯ ಪ್ರತಿಜ್ಞೆ ಬೋಧಿಸಿದರು. ನೇಚರ್‍ಕ್ಲಬ್ ಪೂರ್ವ ವಿದ್ಯಾರ್ಥಿಗಳಿಂದ ನಿರ್ಮಿತಗೊಂಡ ಬಯಲುರಂಗಮಂಟಪದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಿಕ್ಷಕ ವೃಂದ, ವಿದ್ಯಾರ್ಥಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ವನ್ಯಜೀವಿ ಸಪ್ತಾಹ: ಪರಿಸರ ಸಂರಕ್ಷಣೆ ಬಗ್ಗೆ ಪ್ರತಿಜ್ಞೆ
0
ಅಕ್ಟೋಬರ್ 08, 2022
Tags