ಪಣಜಿ: ಗೋವಾದ ಅಸ್ಸಾಗಾವೊ ಗ್ರಾಮದಲ್ಲಿನ ವಿವಾದಿತ ಕೆಫೆ 'ಸಿಲ್ಲಿ ಸೋಲ್ಸ್'ಗೆ ನೀಡಲಾದ ಮದ್ಯದ ಪರವಾನಗಿಯನ್ನು ರದ್ದುಪಡಿಸಲು ಗೋವಾ ರಾಜ್ಯ ಅಬಕಾರಿ ಆಯುಕ್ತ ನಾರಾಯಣ ಗಡ್ ಗುರುವಾರ ನಿರಾಕರಿಸಿದ್ದಾರೆ.
ಕೆಫೆಯ ಮದ್ಯದ ಪರವಾನಗಿಯನ್ನು ರದ್ದುಗೊಳಿಸಬೇಕೆಂದು ಕೋರಿ ವಕೀಲ, ಸಾಮಾಜಿಕ ಕಾರ್ಯಕರ್ತ ಐರಿಸ್ ರೋಡ್ರಿಗಸ್ ಎಂಬುವವರು ಆಯುಕ್ತರಿಗೆ ದೂರು ಸಲ್ಲಿಸಿದ್ದರು.