ದುಬೈ: ಏರ್ ಇಂಡಿಯಾ ಎಕ್ಸ್ ಪ್ರೆಸ್ ಹೊಸ ಸೇವೆಯನ್ನು ಆರಂಭಿಸುವುದಾಗಿ ಘೋಷಿಸಿದೆ. ಏರ್ ಇಂಡಿಯಾ ಎಕ್ಸ್‍ಪ್ರೆಸ್ ದುಬೈನಿಂದ ಕಣ್ಣೂರಿಗೆ ಮತ್ತು ಶಾರ್ಜಾದಿಂದ ವಿಜಯವಾಡಕ್ಕೆ ಹೊಸ ಸೇವೆಯನ್ನು ಪ್ರಾರಂಭಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವೆಂಬರ್ 1 ರಿಂದ ಪ್ರಾರಂಭವಾಗುವ ದುಬೈ ಕಣ್ಣೂರು ಸೇವೆಯು ಕೇರಳೀಯರಿಗೆ ಏರ್ ಇಂಡಿಯಾ ಎಕ್ಸ್‍ಪ್ರೆಸ್ ನ ಕೇರಳ ಜನ್ಮದಿನದ ಉಡುಗೊರೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾರಕ್ಕೆ 4 ಸೇವೆಗಳು ಇರುತ್ತವೆ. ಟಿಕೆಟ್ ಬೆಲೆ 300 ದಿರ್ಹಮ್. ಉದ್ಘಾಟನೆಯ ಅಂಗವಾಗಿ ಕಣ್ಣೂರಿಗೆ 5 ಕೆಜಿ ಹೆಚ್ಚುವರಿ ಸಾಮಾನು ಸರಂಜಾಮುಗಳನ್ನು ಅನುಮತಿಸಲಾಗುವುದು.
ಕೇರಳ ರಾಜ್ಯೋತ್ಸವ ಉಡುಗೊರೆ: ದುಬೈನಿಂದ ಕಣ್ಣೂರಿಗೆ ಹೊಸ ವಿಮಾನ ಸೇವೆ
0
ಅಕ್ಟೋಬರ್ 30, 2022