ಕಾಸರಗೋಡು: ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ವಿರುದ್ಧ ಪೋಸ್ಟರ್ ಕುಂಬಳೆಯಲ್ಲಿ ಕಂಡುಬಂದಿದೆ. ತ್ಯಾಗ ಬಲಿದಾನಿಗಳನ್ನು ಅವಮಾನಿಸಿದ ನಾಯಕರನ್ನು ಕೆ.ಸುರೇಂದ್ರನ್ ರಕ್ಷಿಸಿದ್ದಾರೆ ಎಂದು ಪೋಸ್ಟರ್ ನಲ್ಲಿ ಆರೋಪಿಸಲಾಗಿದೆ.
ಸುರೇಂದ್ರನ್ ಅವರು ಇಂದು ಸಂಜೆ ಕುಂಬಳೆಯಲ್ಲಿ ನಡೆಯಲಿರುವ ಬಿಜೆಪಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿದ್ದು, ಕಾಸರಗೋಡು ನಗರ, ಕುಂಬಳೆ, ಸೀತಾಂಗೋಳಿ, ಕರಂದಕ್ಕಾಡ್ ನಲ್ಲಿ ಪೋಸ್ಟರ್ ಕಾಣಿಸಿಕೊಂಡಿದೆ.
ಕೆ ಸುರೇಂದ್ರನ್ ಅವರ ಚಿತ್ರದ ಜೊತೆಗೆ ‘ಕುಂಬಳೆ ಬಲಿದಾನಿಯನ್ನು ಅವಮಾನಿಸಿದ ನಾಯಕರನ್ನು ರಕ್ಷಿಸುವ ಕಾಫಿಬೀಜ ಕಳ್ಳ ಕುಂಬಳೆಗೆ ಬರುತ್ತಿದ್ದಾನೆ. ಪ್ರತಿಭಟಿಸಿ ಮತ್ತು ಪ್ರತಿಕ್ರಿಯಿಸಿ. ಸಂತ್ರಸ್ತರಿಗೆ ನ್ಯಾಯ ಸಿಗುವವರೆಗೆ ಹೋರಾಡಿ’ ಎಂಬ ಪೋಸ್ಟರ್ ಹರಿದಾಡುತ್ತಿದೆ. ಮಲಯಾಳಂ ಮತ್ತು ಕನ್ನಡದಲ್ಲಿ ಪೋಸ್ಟರ್‍ಗಳಿವೆ. ಬಿಜೆಪಿ ಕಾರ್ಯಕರ್ತನ ಹತ್ಯೆ ಪ್ರಕರಣದ ಆರೋಪಿಯಾಗಿರುವ ಸಿಪಿಎಂ ನಾಯಕನಿರುವ ಕುಂಬಳೆ ಪಂಚಾಯತ್ ಸ್ಥಾಯಿ ಸಮಿತಿಗೆ ಬಿಜೆಪಿ ಬೆಂಬಲ ನೀಡಿರುವುದನ್ನು ವಿರೋಧಿಸಿ ಜಿಲ್ಲೆಯಲ್ಲಿ ಈ ಹಿಂದೆ ಪ್ರತಿಭಟನೆ ನಡೆದಿತ್ತು. ಇದೇ ವೇಳೆ ಪೋಸ್ಟರ್ ವಿಚಾರವಾಗಿ ಸುದ್ದಿಯಾದ ಬಳಿಕ ಇದೀಗ ಈ ಪೋಸ್ಟರ್ ನ್ನು ತೆಗೆಯಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ವಿರುದ್ದ ವಿವಿಧೆಡೆ ಪೋಸ್ಟರ್: 'ಕಾಫಿಬೀಜ ಕಳ್ಳ ಕುಂಬಳೆ ಮಣ್ಣಿಗೆ’ ‘ನ್ಯಾಯ ಸಿಗುವವರೆಗೆ ಪ್ರತಿಭಟನೆ': ವಿವಾದಾತ್ಮಕ ಫಲಕಗಳು
0
ಅಕ್ಟೋಬರ್ 21, 2022