ಮಂಜೇಶ್ವರ: ಶ್ರೀ ಪಂಚಲಿಂಗೇಶ್ವರ ದೇವರು ಮತ್ತು ಮಲರಾಯ ದೈವಂಗಳ ಭಂಡಾರ ಬಾಯಾರು, ಇಲ್ಲಿ ಜರಗಿದ ನವರಾತ್ರಿ ಉತ್ಸವದಲ್ಲಿ ಮೀಯಪದವಿನ ವಿದ್ಯಾವರ್ಧಕ ಬಾಲಿಕೆಯರ ಯಕ್ಷಗಾನ ಬಳಗದಿಂದ 'ಶಿವಾನುಗ್ರಹ' ಎಂಬ ಕಥಾಭಾಗದ ತಾಳಮದ್ದಳೆ ಜರಗಿತು.ಪಾತ್ರ ವರ್ಗದಲ್ಲಿ ಶಾರ್ವರಿ ಯನ್. ನಾವಡ, ಸುಮನ, ಕೀರ್ತಿ ಪಿ. ಆಳ್ವ ಮತ್ತು ಸಾನ್ನಿಧ್ಯ ಭಾಗವಹಿಸಿದರು. ಹಿಮ್ಮೇಳ ದಲ್ಲಿ ಭಾಗವತರಾಗಿ ರವಿಶಂಕರ್ ಮಧೂರು ಹಾಗೂ ವಿಘ್ನೇಶ್ ಮಾಸ್ತರ್, ಚೆಂಡೆಯಲ್ಲಿ ಗೋಪಾಲಕೃಷ್ಣ ನಾವಡ ಮಧೂರು ಮತ್ತು ಮೃದಂಗದಲ್ಲಿ ಮುರಳೀಮಾಧವ ಮಧೂರು ಸಹಕರಿಸಿದರು. ಅಧ್ಯಾಪಕ ನಾರಾಯಣ ನಾವಡ ಬಾಲಿಕೆಯರಿಗೆ ತರಬೇತಿಯನ್ನು ನೀಡಿದ್ದರು.
ಬಾಲಿಕೆಯರ ಯಕ್ಷ ಬಳಗದಿಂದ ತಾಳಮದ್ದಳೆ
0
ಅಕ್ಟೋಬರ್ 06, 2022