ನವದೆಹಲಿ: ಯಾವುದೇ ಸಾಮಾಜಿಕ ಜಾಲತಾಣಗಳು ಭಾರತೀಯ ಕಾನೂನಿಗನುಸರವಾಗಿ ನಡೆದುಕೊಳ್ಳಬೇಕು. ಭಾಕತದ ಸಂವಿಧಾನದ ನಿಬಂಧನೆಗಳು ಮತ್ತು ಭಾರತದ ಸಾರ್ವಭೌಮ ಕಾನೂನುಗಳನ್ನು ಪಾಲಿಸುವುದನ್ನು ಕಡ್ಡಾಯಗೊಳಿಸುವ ಹೊಸ ಐಟಿ ನೀತಿಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದದಿ, ತಪ್ಪು ಮಾಹಿತಿಗಳು ದೇಶದ ಸಮಗ್ರತೆ, ಭದ್ರತೆಗೆ ಧಕ್ಕೆ ತರುವಂತಹ ಸಂದೇಶಗಳು, ಲೈಂಗಿಕ ದೌರ್ಜನ್ಯದ ವಿಚಾರಗಳನ್ನು ಹರಡುವುದಕ್ಕೆ ಕಡಿವಾಣ ಹಾಕಲು ಈ ಹೊಸ ಐಟಿ ಕಾಯ್ದೆ ಜಾರಿ ಮಾಡಲಾಗಿದೆ ಎಂದು ಕೇಂದ್ರದ ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮದ ದಿಗ್ಗಜ ಟ್ವಿಟರ್ ಕಂಪನಿ ತನ್ನ ಸಂಸ್ಥೆಯಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದ ಭಾರತೀಯರನ್ನು ವಜಾಗೊಳಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಐಟಿ ನೀತಿಗೆ ತಿದ್ದುಪಡಿ ತಂದು ಈ ಸಾಮಾಜಿಕ ಮಾಧ್ಯಮ ಸಂಸ್ಥೆಗಳ ಕಡಿವಾಣಕ್ಕೆ ಮುಂದಾಗಿದೆ.
ಈ ಹೊಸ ಐಟಿ ಕಾನೂನಿನಿಂದ ಟ್ವಿಟರ್, ಫೇಸ್ ಬುಕ್, ಯೂ ಟ್ಯೂಬ್, ಇನ್ಸ್ಟಾಗ್ರಾಮ್ ನಂತಹ ಸಾಮಾಜಿಕ ಮಾಧ್ಯಮಗಳು ಮತ್ತು ಅವುಗಳ ಬಳಕೆದಾರರ ಮೇಲೆ ಭಾರತ ಸರ್ಕಾರದ ನಿಯಂತ್ರಣಕ್ಕೆ ಅವಕಾಶ ಮಾಡಿಕೊಡುತ್ತದೆ.ಈ ಹೊಸ ಐಟಿ ಕಾನೂನಿನಿಂದ ಟ್ವಿಟರ್, ಫೇಸ್ ಬುಕ್, ಯೂ ಟ್ಯೂಬ್, ಇನ್ಸ್ಟಾಗ್ರಾಮ್ ನಂತಹ ಸಾಮಾಜಿಕ ಮಾಧ್ಯಮಗಳು ಮತ್ತು ಅವುಗಳ ಬಳಕೆದಾರರ ಮೇಲೆ ಭಾರತ ಸರ್ಕಾರದ ನಿಯಂತ್ರಣಕ್ಕೆ ಅವಕಾಶ ಮಾಡಿಕೊಡುತ್ತದೆ.