ದೇಶದಲ್ಲಿ ಕೋವಿಡ್-19 (Covid-19) ಸಾಂಕ್ರಾಮಿಕದ ಬಳಿಕ, ಆರೋಗ್ಯವಂತ ಮಕ್ಕಳಿಗೆ ಹೋಲಿಸಿದರೆ ಸೋಂಕಿತ ಮಕ್ಕಳ ಲಸಿಕೆ ಹಾಕಿಸುವಿಕೆ ಕುಂಠಿತವಾಗಿದೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ.
"ಭಾರತದಲ್ಲಿ ಬಾಲ್ಯದ ಲಸಿಕೆ ಕವರೇಜ್ ಮತ್ತು ವೇಳಾಪಟ್ಟಿ ಮೇಲೆ ಕೋವಿಡ್-19 ಸಾಂಕ್ರಾಮಿಕದ ಪರಿಣಾಮ: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-2021ರ ಪೂರ್ವಾನ್ವಯ ವಿಶ್ಲೇಷಣೆ" (The effect of the COVID-19 pandemic on routine childhood immunization coverage and timeliness in India: Retrospective analysis of the National Family Health Survey of 2019-2021 data) ಎಂಬ ಶೀರ್ಷಿಕೆಯ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.
ವರದಿ ಅಕ್ಟೋಬರ್ 21ರಂದು ಆನ್‍ಲೈನ್‍ನಲ್ಲಿ ಲಭ್ಯವಿದೆ.
"ಕೋವಿಡ್-19 ಸಾಂಕ್ರಾಮಿಕ ಜಾಗತಿಕವಾಗಿ ಆರೋಗ್ಯ ವ್ಯವಸ್ಥೆಯ ವ್ಯತ್ಯಯಕ್ಕೆ ಕಾರಣವಾಗಿದೆ. 2021ರ ಏಪ್ರಿಲ್‍ನಲ್ಲಿ ಭಾರತದಲ್ಲಿ ಕೂಡಾ ಸಾಮಾನ್ಯವಾಗಿ ನೀಡುವ ಮಕ್ಕಳ ಲಸಿಕೆ ಮತ್ತು ವೇಳಾಪಟ್ಟಿಯ ಮೇಲೂ ಇದು ಪರಿಣಾಮ ಬೀರಿದೆ ಎಂದು ಲ್ಯಾನ್ಸೆಟ್ ಅಧ್ಯಯನ ವರದಿ ಹೇಳಿದೆ.
ಇತರ ಮಕ್ಕಳಿಗೆ ಹೋಲಿಸಿದರೆ ಕೋವಿಡ್ ಬಾಧಿತ ಮಕ್ಕಳಲ್ಲಿ ಲಸಿಕೆ ಕವರೇಜ್, ಬಿಸಿಜಿ ಲಸಿಕೆ ಮತ್ತು ಹೆಪಟೈಟಿಸ್ ಬಿ ಲಸಿಕೆಯಲ್ಲಿ ಶೇಕಡ ಶೇಕಡ 2ರಷ್ಟು, ಡಿಪಿಟಿ-3ರಲ್ಲಿ ಶೇಕಡ 9ರಷ್ಟು ಹಾಗೂ ಪೋಲಿಯೊ ಲಸಿಕೆಯಲ್ಲಿ ಶೇಕಡ 10ರಷ್ಟು ಕಡಿಮೆ. ಆದರೆ ಎಂಸಿವಿ-1ನಲ್ಲಿ ದೊಡ್ಡ ವ್ಯತ್ಯಾಸ ಇಲ್ಲ ಎಂದು ವರದಿ ವಿವರಿಸಿದೆ. ಈ ಬಗ್ಗೆ hindustantimes.com ವರದಿ ಮಾಡಿದೆ.