ಕಾಸರಗೋಡು: ಜಿಲ್ಲಾ ಶಿಶು ಕಲ್ಯಾಣ ಸಮಿತಿಯ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸಾಹಿತ್ಯ ರಚನಾ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ನವೆಂಬರ್ 5 ರಂದು ಪಾಲಕ್ಕುನ್ ಅಂಬಿಕಾ ಕಾಲೇಜಿನಲ್ಲಿ ಕನ್ನಡ ಮತ್ತು ಮಲಯಾಳ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದೆ. ಕಿರಿಯ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಕಥೆ-ಕವನ ರಚನಾ ಸ್ಪರ್ಧೆಗಳು, ಪ್ರೌಢಶಾಲೆ ಮತ್ತು ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳಿಗೆ ಕಥೆ-ಕವನ-ಪ್ರಬಂಧ ರಚನಾ . ಸ್ಪರ್ಧೆಗಳು, 4 ರಿಂದ 7 ನೇ ತರಗತಿ ವರೆಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆಗಳು ನಡೆಯಲಿವೆ. ಭಾಷಣ ಸ್ಪರ್ಧೆಯಿಂದ ವಿದ್ಯಾರ್ಥಿಸಂಸತ್ತಿನ ಪ್ರಧಾನಿ, ರಾಷ್ಟ್ರಪತಿ, ಸ್ಪೀಕರ್ ಮುಂತಾದವರನ್ನು ಆಯ್ಕೆ ಮಾಡಲಾಗುವುದು. ಬೆಳಗ್ಗೆ 10.30ರಿಂದ 11.30ರವರೆಗೆ ಕಥಾ ಸ್ಪರ್ಧೆ, ಮಧ್ಯಾಹ್ನ 12ರಿಂದ 1ರವರೆಗೆ ಕವನ ಸ್ಪರ್ಧೆ, ಮಧ್ಯಾಹ್ನ 2ರಿಂದ 3ರವರೆಗೆ ಪ್ರಬಂಧ ಸ್ಪರ್ಧೆ, ಮಧ್ಯಾಹ್ನ 3ರಿಂದ 4ರವರೆಗೆ ಭಾಷಣ ಸ್ಪರ್ಧೆ ನಡೆಯಲಿದೆ. ಸ್ಪರ್ಧೆ ನಡೆಯುವ ಅರ್ಧ ಗಂಟೆ ಮೊದಲು ಸ್ಪರ್ಧಾಳುಗಳಿಗೆ ವಿಷಯವನ್ನು ನೀಡಲಾಗುವುದು. ಸ್ಪರ್ಧೆ ಪ್ರಾರಂಭವಾಗುವ ಒಂದು ಗಂಟೆ ಮೊದಲು ವೈಯಕ್ತಿಕವಾಗಿ ಭಾಗವಹಿಸಲು ಬಯಸುವ ವಿದ್ಯಾರ್ಥಿಗಳು ತಮ್ಮ ಹೆಸರು ನೋಂದಾಯಿಸಬೇಕು. ವಿಜೇತರಿಗೆ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರ ಹಾಗೂ ಬಹುಮಾನ ವಿತರಿಸಲಾಗುವುದು. ವಿಜೇತರು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಅಹ9ತೆಯನ್ನು ಪಡೆಯುವರು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ(9961001616)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಮಕ್ಕಳ ದಿನಾಚರಣೆ: ವಿವಿಧ ಸಾಹಿತ್ಯ ರಚನಾ ಸ್ಪರ್ಧೆ
0
ಅಕ್ಟೋಬರ್ 29, 2022
Tags