HEALTH TIPS

ನಮ್ಮಲ್ಲಿರುವ ಸೀರೆಯನ್ನು ರೆಡಿ ಟು ವೇರ್‌ ಸ್ಯಾರಿ ಮಾಡಿಸಬಹುದೇ?

Top Post Ad

Click to join Samarasasudhi Official Whatsapp Group

Qries

 ಮದುವೆ, ನಾಮಕರಣ,ಹಬ್ಬ, ಹರಿದಿನಗಳಲ್ಲಿ ಸೀರೆ ಉಡುವಷ್ಟು ಚೆಂದ ಮತ್ಯಾವ ಉಡುಗೆಯಲ್ಲೂ ಸಿಗುವುದು. ಸೆಲ್ವಾರ್‌ ಕಮೀಜ್, ಘಾಗ್ರ ಇವೆಲ್ಲವನ್ನೂ ಮೀರಿಸುವ ಅಂದ ಸೀರೆಗಿದೆ. ಬಳಕುವ ಬಳ್ಳಿಯಂತಿರಲಿ ಅಥವಾ ದುಂಡು ಮಲ್ಲಿಗೆಯಂತಿರಲಿ ಎಲ್ಲರೂ ಸೀರೆಯಲ್ಲಿ ತುಂಬಾನೇ ಆಕರ್ಷಕವಾಗಿ ಕಾಣುತ್ತಾರೆ. ಇನ್ನು ಸೆಕ್ಸಿಯಾಗಿ ಕಾಣ ಬಯಸುವವರಿಗೆ ಸೀರೆಯಷ್ಟು ಸೆಕ್ಸಿಯಾದ ಡ್ರೆಸ್ ಮತ್ತೊಂದಿಲ್ಲ. ಸಾಂಪ್ರದಾಯಿಕವಾಗಿಯೂ-ಮಾಡರ್ನ್‌ ಆಗಿಯೂ ಧರಿಸಲು ಈ ಸೀರೆ ಸೈ

ಸೀರೆ ಉಟ್ಟರೆ ಆಕರ್ಷಕವಾಗಿ ಕಾಣುವುದರಲ್ಲಿ ನೋ ಡೌಟ್, ಆದರೆ ಸೀರೆ ಉಡಲು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಅದರ ನೆರಿಗೆ ಹಿಡಿಯುವುದೇ ದೊಡ್ಡ ಕೆಲಸ. ಎಷ್ಟೋ ಜನರಿಗೆ ಸೀರೆ ಉಡುವಾಗ ನೆರಿಗೆ ಹಿಡಿಯಲು ಮತ್ತೊಬ್ಬರ ಹೆಲ್ಪ್‌ ಬೇಕಾಗುವುದು. ಅಂಥವರು ಅವಸರದಲ್ಲಿ ಸೀರೆ ಧರಿಸಲು ರೆಡಿ ಟು ವೇರ್‌ ಸ್ಯಾರಿ ಆಯ್ಕೆ ಮಾಡಬಹುದು. ಈ ಸೀರೆಯನ್ನು ಕೆಲವೇ ನಿಮಿಷಗಳಲ್ಲಿ ಧರಿಸಬಹುದು.

ಅದರಲ್ಲೂ ಈ ಕಾರಣಗಳಿಗೆ ರೆಡಿ ಮೇಡ್ ಸ್ಯಾರಿ ಕಲೆಕ್ಷನ್‌ ಕೂಡ ನಿಮ್ಮ ಬಳಿ ಇರುವುದು ಒಳ್ಳೆಯದು:

ಬೇಗನೆ ರಡಿಯಾಗಬಹುದು

ರೆಡಿ ಟು ವೇರ್ ಸೀರೆಯಲ್ಲಿ ನೆರಿಗೆ ಹಿಡಿಯು ಕೆಲಸ ಇರಲ್ಲ, ಆದ್ದರಿಂದ ಬೇಗನೆ ಧರಿಸಬಹುದು. ಸೆರಗು ಮಾತ್ರ ಮಾಡಿದರೆ ಸಾಕು, ಸೆರಗು ಮಾಡಲು ಬರಲ್ಲ ಅಂದರೆ ಸಿಂಗಲ್‌ ಪಿನ್ ಹಾಕಬಹುದು. ಹೆಚ್ಚೆಂದರೆ 5 ನಿಮಿಷದೊಳಗೆ ಈ ಸೀರೆ ಧರಿಸಬಹುದು.

ಸರಿಯಾದ ನೆರಿಗೆಯಿಂದಾಗಿ ಮೈ ಮಾಟ ಆಕರ್ಷಕವಾಗಿ ಕಾಣುವುದು

ಸೀರೆ ಉಟ್ಟಾಗ ಆಕರ್ಷಕವಾಗಿ ಕಾಣಲು ಅದರ ನೆರಿಗೆ ಸರಿಯಾಗಿ ಹಿಡಿಯಬೇಕು. ಇಲ್ಲದಿದ್ದರೆ ಸೀರೆ ಉಟ್ಟಂತೆ ಅಲ್ಲ ಸುತ್ತಿದಂತೆ ಕಾಣುವುದು. ರೆಡಿ ಮೇಡ್‌ ಸೀರೆಯಲ್ಲಿ ತುಂಬಾನೇ ಆಕರ್ಷಕವಾಗಿ ಕಾಣಬಹುದು.

ತುಂಬಾನೇ ಕಂಫರ್ಟ್

ಇನ್ನು ಕೆಲವರಿಗೆ ಸೀರೆ ಧರಿಸಿದರೆ ಅಷ್ಟು ಕಂಫರ್ಟ್ ಅನಿಸುವುದಿಲ್ಲ, ಅಂಥವರು ರೆಡಿಮೇಡ್ ಸೀರೆ ಧರಿಸಿದರೆ ಸೆಲ್ವಾರ್‌ ಧರಿಸಿದಷ್ಟೇ ಕಂಫರ್ಟ್ ಆಗಿರಬಹುದು.

ರೆಡಿಮೇಡ್‌ ಸೀರೆ ತೆಗೆದುಕೊಳ್ಳುವಾಗ ಗಮನಿಸಬೇಕಾದ ಅಂಶ

ರೆಡಿಮೇಡ್‌ ಸೀರೆ ತೆಗೆದುಕೊಳ್ಳುವಾಗ ನಮ್ಮ ಅಳತೆಗೆ ತಕ್ಕಂತೆ ಸೀರೆ ಖರೀದಿಸಬೇಕು. ತೆಳ್ಳಗಿದ್ದರೆ ಸಮಸ್ಯೆಯಿಲ್ಲ, ದಪ್ಪವಿದ್ದರೆ ಅಳತೆ ತುಂಬಾನೇ ಮುಖ್ಯ.

ಇರುವ ಸೀರೆಯನ್ನು ರೆಡಿಮೇಡ್ ಮಾಡಬಹುದೇ?

ಓ ಯೆಸ್.... ನೀವು ಅದರ ನೆರಿಗೆ ನಿಮ್ಮ ಅಳತೆಗೆ ತೆಗೆದು ಅದನ್ನು ಸ್ಟಿಚ್ ಮಾಡಿಸಿದರೆ ಅಥವಾ ಪಿನ್‌ ಹಾಕಿಸಿದರೆ ಉಡಲು ಸುಲಭವಾಗುವುದು.


 

 

 

 

 

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries