ಬದಿಯಡ್ಕ : ಬದಿಯಡ್ಕದ ದಾರುಲ್ ಇಹ್ಸಾನ್ ದಶವಾರ್ಷಿಕ ಘೋಷಣೆ ಹುಬ್ಬು ರಸೂಲ್ ಸಮ್ಮೇಳನದ ಪ್ರಚಾರಾರ್ಥ ಎರಡು ದಿನಗಳ ಕಾಲ 100 ಕೇಂದ್ರಗಳ ಮೂಲಕ ಸಂಚರಿಸಲಿರುವ ಜಾಥಾಕ್ಕೆ ತಳಂಗರ ಮಲಿಕ್ ದಿನಾರ್ ಮಸೀದಿ ವಠಾರದಿಂದ ಚಾಲನೆ ನೀಡಲಾಯಿತು.
ಈ ಸಂದರ್ಭ ನಡೆದ ಮಖಾಂ ಝಿಯಾರತ್‍ಗೆ ಸೈಯದ್ ಯುಪಿಎಸ್ ಜೆಫ್ರಿ ತಂಗಳ್ ನೇತೃತ್ವ ನೀಡಿದರು. ಸಂದೇಶ ಯಾತ್ರೆಯನ್ನು ಕೇರಳ ಮುಸ್ಲಿಂ ಜಮಾತ್ ಜಿಲ್ಲಾ ಕಾರ್ಯದರ್ಶಿ ಪಳ್ಳಂಗೋಡು ಉದ್ಘಾಟಿಸಿದರು. ಅಬ್ದುಲ್ ಖಾದರ್ ಮದನಿ ಜಾಥಾ ನಾಯಕ ಅಬೂಬಕರ್ ಸಅದಿ ಅವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಜಾಥಾ ಉದ್ಘಾಟಿಸಿದರು. ಸೈಯದ್ ತ್ವಲಹತ್ ತಙಳ್, ನಿಜಾಮುದ್ದೀನ್ ತಙಳ್, ಸೈಫುದ್ದೀನ್ ತಙಳ್, ಬಶೀರ್ ಸಖಾಫಿ ಕೋಳಿಯಂ, ಕಬೀರ್ ಹಿಮಮಿ ಸಖಾಫಿ ಗೋಳಿಯಡ್ಕ, ಹನೀಫ್ ಸಅದಿ ಸವಣೂರು, ಅಶ್ರಫ್ ಕೊಲ್ಯ, ಫೈಸಲ್ ನೆಲ್ಲಿಕಟ್ಟೆ, ಬಾತಿಶ ನೆಲ್ಲಿಕಟ್ಟೆ ಉಪಸ್ಥಿತರಿದ್ದರು. 20ರಂದು ಸಂಜೆ ನಡೆಯುವ ಹುಬುರಸುಲ್ ಸಮ್ಮೇಳನದಲ್ಲಿ ಸೈಯದ್ ಕೆ.ಎಸ್.ಆಟಕೋಯ ತಙಳ್ ಕುಂಬೋಳ್ ದಶ ವಾರ್ಷಿಕ ಘೋಷಣೆ ನಡೆಸುವರು. ಡಾ.ಮೊಹಮ್ಮದ್ ಫಾರೂಕ್ ನಈಮಿ ಕೊಲ್ಲಂ ಮುಖ್ಯ ಭಾಷಣ ಮಾಡುವರು.
ಬದಿಯಡ್ಕದ ದಾರುಲ್ ಇಹ್ಸಾನ್ ದಶವಾರ್ಷಿಕ ಘೋಷಣೆ: ಪ್ರಚಾರ ಜಾಥಾ ಉದ್ಘಾಟನೆ
0
ಅಕ್ಟೋಬರ್ 19, 2022