HEALTH TIPS

ವಿದ್ಯಾಭ್ಯಾಸದ ಜತೆಜತೆಗೆ ಟೀ ಸ್ಟಾರ್ಟ್​ಅಪ್​ ಆರಂಭಿಸಿದ ಬಿ.ಟೆಕ್​ ವಿದ್ಯಾರ್ಥಿನಿ: ಚಾಯ್​ವಾಲಿಯ ಸ್ಫೂರ್ತಿಯ ಕತೆಯಿದು

 

            ಪಟನಾ: ಭಾರತದಲ್ಲಿನ ಪ್ರಖ್ಯಾತ ಚಾಯ್​ವಾಲಾಗಳ ಬಗ್ಗೆ ನಾವು ಕೇಳಿದ್ದೇವೆ. ಅಲ್ಲದೆ, ಪ್ರತಿಯೊಬ್ಬ ಚಹಾ ಪ್ರೇಮಿಗೂ ಓರ್ವ ಫೇವರಿಟ್​ ಚಾಯ್​ವಾಲಾ ಇದ್ದೇ ಇರುತ್ತಾನೆ. ಇದೀಗ ಈ ಪಟ್ಟಿಗೆ ಮತ್ತೊಬ್ಬರು ಸೇರಿದ್ದಾರೆ. ಆದರೆ, ಇವರು ಚಾಯ್​ವಾಲಾ ಅಲ್ಲ ಚಾಯ್​ವಾಲಿ.

ಈ ಖ್ಯಾತ ಚಾಯ್​ವಾಲಿ ಹರಿಯಾಣ ಮೂಲದವರಾಗಿದ್ದು, ಬಿ.ಟೆಕ್​ ವಿದ್ಯಾರ್ಥಿನಿ ಎಂಬುದೇ ವಿಶೇಷ.

             ವಿದ್ಯಾರ್ಥಿನಿಯ ಹೆಸರು ವರ್ತಿಕಾ ಸಿಂಗ್​. ಈಕೆ ಬಿಹಾರದಲ್ಲಿ ಬಿ.ಟೆಕ್​ ಮಾಡುತ್ತಿದ್ದಾರೆ. ತನ್ನದೇಯಾದ ಸ್ಟಾರ್ಟ್​ಅಪ್​ ಮಾಡಬೇಕೆಂಬುದು ಈಕೆ ಕನಸಾಗಿತ್ತು. ಆದರೆ, ಬಿ.ಟೆಕ್​ ಮುಗಿಯುವುದಕ್ಕೆ ಇನ್ನು ನಾಲ್ಕು ವರ್ಷಗಳು ಇರುವುದರಿಂದ ಅಲ್ಲಿಯವರೆಗೂ ಕಾಯಲಾರದೇ ಬಿ.ಟೆಕ್​ ಚಾಯ್​ವಾಲಿ ಹೆಸರಿನಲ್ಲಿ ಟೀ ಸ್ಟಾರ್​ ಆರಂಭಿಸುವ ಮೂಲಕ ತಮ್ಮ ಸ್ಟಾರ್ಟ್​ಅಪ್​ ಕನಸನ್ನು ವರ್ತಿಕಾ ನನಸು ಮಾಡಿಕೊಂಡಿದ್ದಾರೆ. ಹರಿಯಾಣದ ಫರೀದಾಬಾದ್​ನಲ್ಲಿ ವರ್ತಿಕಾ ಟೀ ಸ್ಟಾಲ್​ ಇಟ್ಟುಕೊಂಡಿದ್ದಾರೆ.

                ವರ್ತಿಕಾ ಅವರ ವಿಡಿಯೋವನ್ನು ಸ್ವ್ಯಾಗ್​ ಸೆ ಡಾಕ್ಟರ್​ (Swag Se Doctor) ಹೆಸರಿನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಪೋಸ್ಟ್​ ಮಾಡಲಾಗಿದ್ದು, ವಿಡಿಯೋದಲ್ಲಿ ವರ್ತಿಕಾ ತನ್ನ ಟೀ ಸ್ಟಾಲ್​ ಬಗ್ಗೆ ಮಾಹಿತಿ ನೀಡಿದ್ದಾರೆ. ಫರೀದಾಬಾದ್​ನ ಗ್ರೀನ್​ ಫೀಲ್ಡ್​ ಬಳಿ ಅಳವಡಿಸಿರುವುದಾಗಿ ಮತ್ತು ಬೆಳಗ್ಗೆ 5.30ರಿಂದ ರಾತ್ರಿ 9 ಗಂಟೆಯವರೆಗೆ ತೆರೆದಿರುತ್ತದೆ ಎಂದು ವರ್ತಿಕಾ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries