ಮಂಜೇಶ್ವರ: ಮಂಜೇಶ್ವರ ಬಂಟರ ಸಂಘದ ಮಹಾಸಭೆ ವಿದ್ಯಾರ್ಥಿ ಧನಸಹಾಯ ಹಾಗು ಸಂಘದ ನೂತನ ಕಟ್ಟಡದ ವೇದಿಕೆಯ ಉದ್ಘಾಟನಾ ಕಾರ್ಯಕ್ರಮ ಉದ್ಯಾವರ ಮಾಡದ ಸಂಘದ ನಿವೇಶನದಲ್ಲಿ ಜರಗಿತು.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಯವರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ನಾವು ನಮ್ಮ ಹಿರಿಯರು ಹಾಕಿ ಕೊಟ್ಟ ದಾರಿಯಲ್ಲಿ ನಡೆದು ಮುಂದಿನ ಪೀಳಿಗೆಗೆ ಒಂದು ಆದರ್ಶ ಸಮಾಜದ ನಿರ್ಮಾಣವನ್ನು ಮಾಡಬೇಕಿದೆ ಎಂದು ಹೇಳಿದರು.
ಬೋಲ್ನಾಡು ಗುತ್ತು ದಿ. ಪದ್ಮಾಕರ ಇ.ಗಾಂಭೀರ ವೇದಿಕೆಯ ಉದ್ಘಾಟನೆಯನ್ನು ಮುಂಬೈ ಉದ್ಯಮಿ ಹಾಗು ಬೋಲ್ನಾಡು ಗುತ್ತು ಮುಖ್ಯಸ್ಥ ಚಂದ್ರಹಾಸ್ ರೈ ವೇದಿಕೆಯ ಹೆಸರನ್ನು ಅನಾವರಣಗೊಳಿಸುವ ಮೂಲಕ ನೆರವೇರಿಸಿದರು. ಕಾಸರಗೋಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ನ್ಯಾಯವಾದಿ ಸುಬ್ಬಯ್ಯ ರೈ, ಉಳ್ಳಾಲ ಬಂಟರ ಸಂಘದ ಮಾಜಿ ಅಧ್ಯಕ್ಷ ಡಾ. ಜಯಪಾಲ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಕಾರ್ತಿಕ್ ಶೆಟ್ಟಿ ಮಜಿಬೈಲ್ ಮೊದಲಾದವರು ಮುಖ್ಯ ಅತಿಥಿಯಾಗಿ ಭಾಗವಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮಂಜೇಶ್ವರ ಬಂಟರ ಸಂಘದ ಗೌರವ ಅಧ್ಯಕ್ಷ ರಘು ಶೆಟ್ಟಿ ಕುಂಜತ್ತೂರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಅಧ್ಯಕ್ಷ ದಾಮೋದರ ಶೆಟ್ಟಿ ಕುಂಜತ್ತೂರು ಅತಿಥಿಗಳನ್ನು ಸ್ವಾಗತಿಸಿದರು. ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷ ಮೋಹನ ಯು ಶೆಟ್ಟಿ, ಉದ್ಯಾವರ ಅರಸು ಮಂಜಿμÁ್ಣರ್ ಕ್ಷೇತ್ರದ ಆಡಳಿತ ಮಂಡಳಿಯ ಸದಸ್ಯ ಕಿರಣ್ ಶೆಟ್ಟಿ ಮಾಡ,ಉದ್ಯಮಿ ಕೃಷ್ಣ ಶೆಟ್ಟಿ ಮಲ್ಲುಗುರಿ ,ಉದ್ಯಮಿ ಮಹೇಶ್ ಶೆಟ್ಟಿ ಕುಂಜತ್ತೂರು, ಉದ್ಯಮಿ ವಿಕಾಸ್ ಶೆಟ್ಟಿ ಪಾದೆ ಗುತ್ತು ,ಉದ್ಯಮಿ ಜಯರಾಮ್ ಶೆಟ್ಟಿ ಆರ್ವಾರ್ ಮುಂತಾದವರು ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಲಕೆ ಧನ್ಯವಾದ ಸಮರ್ಪಣೆ ಮಾಡಿದರು. ಸಂಘದ ಯುವ ಸಮಿತಿಯ ಅಧ್ಯಕ್ಷರಾದ ಮೋಹನ್ ಮಾಡ ರವರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಮತ್ತು ದೇಶ ಹಾಗು ರಾಜ್ಯ ಮಟ್ಟದಲ್ಲಿ ವಿಶೇಷ ಪ್ರತಿಭೆ ತೋರಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಬಡ ವಿದ್ಯಾರ್ಥಿಗಳಿಗೆ ಧನಸಹಾಯ ನೀಡಲಾಯಿತು. ಬಳಿಕ ಹಲವಾರು ಸಾಂಸ್ಕøತಿಕ ಹಾಗು ಕ್ರೀಡಾ ಚಟುವಟಿಕೆಗಳು ನಡೆದವು.
ಬಂಟರ ಸಂಘ ಮಂಜೇಶ್ವರ ಘಟಕದ ಸಭೆ: ಬಂಟ ಸಮಾಜವು ಎಲ್ಲ ಸಮಾಜಕ್ಕೆ ಆದರ್ಶವಾಗಬೇಕಿದೆ: ಅಜಿತ್ ಕುಮಾರ್ ರೈ ಮಾಲಾಡಿ
0
ಅಕ್ಟೋಬರ್ 08, 2022
Tags