ಪೆರ್ಲ::ಎಣ್ಮಕಜೆ ಗ್ರಾಮ ಪಂಚಾಯಿತಿ ಕುಟುಂಬಶ್ರೀ ಸಿಡಿಎಸ್‍ನ ಕೀರ್ತಿ ಸಫಲ ಸಮಗ್ರ ಪ್ರೋಸೆಸಿಂಗ್ ಯೂನಿಟ್‍ನ 13ನೇ ವಾರ್ಷಿಕೋತ್ಸವ ಬಜಕೂಡ್ಲು ಕಾನದ ಯೂನಿಟ್‍ನಲ್ಲಿ ಜರುಗಿತು. ಎಣ್ಮಕಜೆ ಗ್ರಾಮ ಪಂಚಾಯಿತಿ ಸ್ಥಾಯೀ ಸಮಿತಿ ಅಧ್ಯಕ್ಷೆ ಸೌದಬಿ ಹನೀಫ್ ಸಮಾರಂಭ ಉದ್ಘಾಟಿಸಿದರು.
ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ಯೂನಿಟ್ ಪ್ರಬಂಧಕ ವಲ್ಸರಾಜ್ ವರದಿ ಮಂಡಿಸಿದರು. ಗ್ರಾಮ ಪಂಚಾಯಿತಿ ಸದಸ್ಯೆ ಉಷಾಗಣೇಶ್, ಸಿಡಿಎಸ್ ಸದಸ್ಯರಾದ ಶಾರದ, ಸಿಸಿಲಿಯಾ, ಗಿರಿಜಾ, ಪುಷ್ಪಲತಾ, ಲಲಿತಾ, ಫಾತಿಮಾ, ರೇಣುಕಾ ಉಪಸ್ಥೀತರಿದ್ದರು. ವಿಜಯಲಕ್ಷ್ಮೀ ವಂದಿಸಿದರು.
ಎಣ್ಮಕಜೆ: ಕೀರ್ತಿ ಸಫಲ ಸಮಗ್ರ ಪ್ರೊಸೆಸಿಂಗ್ ಯೂನಿಟ್ ವಾರ್ಷಿಕೋತ್ಸವ
0
ಅಕ್ಟೋಬರ್ 17, 2022