ಕಾಸರಗೋಡು: ಜಿಲ್ಲಾ ಪಂಚಾಯಿತಿ ಯೋಜನೆಯನ್ವಯ ಜಿಲ್ಲೆಯ ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಲಾಯಿತು. ರಾಜ್ಯ ನೀgರಾವರಿ ಖಾತೆ ಸಚಿವ ರೋಶಿ ಆಗಸ್ಟಿನ್ ಸಲಕರಣೆಗಳನ್ನು ಫಲಾನುಭವಿಗಳಿಗೆ ವಿತರಿಸಿದರು.
ಯೋಜನೆಯ ಅವಧಿಯಲ್ಲಿ ಒಟ್ಟು 106 ತ್ರಿಚಕ್ರ ವಾಹನ ಮತ್ತು 15 ಶ್ರವಣ ಸಲಕರಣೆಗಳನ್ನು ನೀಡಲಾಗಿದೆ. ಸುಗಮವಾಗಿ ಚಲಿಸುವ ಆಧುನಿಕ ವ್ಯವಸ್ಥೆಯಲ್ಲಿ 1.5 ಲಕ್ಷ ರೂ. ವೆಚ್ಚದಲ್ಲಿ 13 ಗಾಲಿಕುರ್ಚಿಗಳನ್ನೂ ವಿತರಿಸಲಾಯಿತು. ವಿಕಲಚೇತನರ ಸೌಹಾರ್ದ ಮನೆ ಮಾಡಲು 5.59 ಲಕ್ಷ ಮಂಜೂರಾಗಿದೆ. ಎಲ್ಲ ಯೋಜನೆಗಳಿಗಾಗಿ ಒಟ್ಟು 1.25 ಕೋಟಿ ರೂ. ವೆಚ್ಚಮಾಡಲಾಗಿದೆ ಎಂದು ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಶೀಬಾ ಮುಮ್ತಾಜ್ ತಿಳಿಸಿದರು.
ವಿಕಲಚೇತನರಿಗೆ ತ್ರಿಚಕ್ರವಾಹನ, ಶ್ರವಣ ಸಲಕರಣೆ ವಿತರಣೆ
0
ಅಕ್ಟೋಬರ್ 30, 2022
Tags