ಕಾಸರಗೋಡು: ಕನ್ನಡ ಹೋರಾಟ ಸಮಿತಿಯ ಮಹತ್ವದ ಸಮಾಲೋಚನಾ ಸಭೆ ಅ.22 ರಂದು ಶನಿವಾರ ಮಧ್ಯಾಹ್ನ 2.30 ಕ್ಕೆ ಬ್ಯಾಂಕ್ ರಸ್ತೆಯ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಜರಗಲಿದೆ. ಪ್ರಸ್ತುತ ಕಾಸರಗೋಡಿನಲ್ಲಿ ಕನ್ನಡಿಗರು ಅನುಭವಿಸುತ್ತಿರುವ ಜ್ವಲಂತ ಸಮಸ್ಯೆಗಳು ಹಾಗು ಕನ್ನಡ ರಾಜ್ಯೋತ್ಸವ ದಿನ ನ.1 ರಂದು ಕಾಸರಗೋಡು ಕನ್ನಡಿಗರ ಹಕ್ಕು ಸಂರಕ್ಷಣಾ ದಿನ ನಡೆಸುವ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳುವ ಬಗ್ಗೆ ಸಭೆ ಕರೆಯಲಾಗಿದೆ.
ವಿವಿಧ ಕನ್ನಡ ಪರ ಸಂಘಟನೆಗಳ ಪ್ರತಿನಿಧಿಗಳು, ಕನ್ನಡ ಮಾಧ್ಯಮ ಅಧ್ಯಾಪಕ ಸಂಘ, ಎಲ್‍ಡಿ ಕ್ಲರ್ಕ್ ರ್ಯಾಂಕ್ ಹೋಲ್ಡರ್ಸ್, ಕನ್ನಡ ನೌಕರರ ಮತ್ತು ಕನ್ನಡ ನಿವೃತ್ತ ನೌಕರರ ಪ್ರತಿನಿಧಿಗಳು ಸಭೆಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಕಾಸರಗೋಡಿನಲ್ಲಿ ಕನ್ನಡ ಭಾಷೆ ಸಂಸ್ಕøತಿಯ ಅಸ್ತಿತ್ವವನ್ನು ಉಳಿಸುವ ಕೆಲಸವನ್ನು ಕೈಜೋಡಿಸಬೇಕೆಂದು ಕನ್ನಡ ಹೋರಾಟ ಸಮಿತಿಯ ಪದಾಧಿಕಾರಿಗಳು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಹೋರಾಟ ಸಮಿತಿಯ ಸಮಾಲೋಚನಾ ಸಭೆ
0
ಅಕ್ಟೋಬರ್ 20, 2022