ಪೆರ್ಲ: ಸವಿಹೃದಯದ ಕವಿ ಮಿತ್ರರು ವೇದಿಕೆಯ ಆಶ್ರಯದಲ್ಲಿ ದಸರಾ ನಾಡ ಹಬ್ಬ ಆಚರಣೆಯ ಆಂಗವಾಗಿ ಕವಿಗೋಷ್ಠಿ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ ಪೆರ್ಲ ವ್ಯಾಪಾರಿ ಭವನದ ಸಭಾಂಗಣದಲ್ಲಿ ಭಾನುವಾರ ಜರಗಿತು. ಹಿರಿಯ ವೈದ್ಯ,ಸಾಮಾಜಿಕ ಮುಂದಾಳು ಡಾ.ಕೇಶವ ನಾಯ್ಕ್ ಖಂಡಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿ, ಯಾವುದೇ ಅತ್ಯಾಧುನಿಕ ತಂತ್ರಜ್ಞಾನಗಳು ಬಂದರೂ ಸಾಹಿತ್ಯಕ್ಕೆ ಅದರದ್ದೇ ಅದ ಮೌಲ್ಯವಿದೆ. ರಾಜಾಡಳಿತ ಕಾಲದಲ್ಲಿಯೇ ಸಾಹಿತ್ಯ ಆರಾಧನೆಗಳು ಹಾಗೂ ಕವಿ ಪುಂಗವರಿಗೆ ಮನ್ನಣೆ ಕಲ್ಪಿಸಿದ ಸಂಸ್ಕøತಿ ನಮ್ಮದು, ಅದನ್ನು ಕಾಯ್ದುಕೊಳ್ಳುವಲ್ಲಿ ಜನ ಜಾಗೃತಿ ಮೂಡಿಸುತ್ತಾ ಹೊಸ ಪೀಳಿಗೆಗೆ ಸಾಹಿತ್ಯ ಸ್ಪೂರ್ತಿ ಮೂಡಿಸುತ್ತಿರುವ ಈ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದರು.
ಯುವ ಕವಿ,ಸಾಮಾಜಿಕ ಮುಂದಾಳು ಉದಯ ಭಾಸ್ಕರ್ ಸುಳ್ಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಬರಹಗಾರ ಅಥವ ಕವಿ ಎಂದೂ ಸನ್ಮಾನ ಪ್ರಶಸ್ತಿಗಳನ್ನು ಹಂಬಲಿಸದೆ ಸಮಾಜವನ್ನು ತನ್ನ ಸಾಹಿತ್ಯದ ಮೂಲಕ ತಿದ್ದುವ ಕಾರ್ಯ ಮಾಡಬೇಕು. ಪ್ರತಿಯೋರ್ವ ಸಾಹಿತಿಯೂ ಸಮಾಜ ತಪ್ಪುಗಳಲ್ಲಿ ತಾನೂ ಕೂಡಾ ಭಾಗಿ ಎಂಬ ಮನೋಭಾವನೆ ಬೆಳೆಸಿಕೊಂಡರೆ ಮಾತ್ರ ಸಾಹಿತ್ಯ ಹಾಗೂ ಸಮಾಜ ಸಂಪತ್ಭರಿತವಾಗಿರಲು ಸಾಧ್ಯ ಎಂದರು.
ಶಿಕ್ಷಕಿ,ಸಾಹಿತಿ ಪ್ರೇಮಾ ಶೆಟ್ಟಿ ಮುಲ್ಕಿ ನವರಾತ್ರಿ ಹಾಗೂ ಸಾಹಿತ್ಯ ಎಂಬ ವಿಚಾರದ ಬಗ್ಗೆ ಉಪನ್ಯಾಸಗೈದರು.ಹಿರಿಯ ಸಾಹಿತಿ ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ವ್ಯಂಗ್ಯಚಿತ್ರಕಾರ,ಕವಿ ವೆಂಕಟ್ ಭಟ್ ಎಡನೀರು,ಉಪನ್ಯಾಸಕ ಬಾಲಕೃಷ್ಣ ಬೇರಿಕೆ,ಕುಂಬಳೆ ಕೋಸ್ಟಲ್ ಸಬ್ ಇನ್ಸ್ ಪೆಕ್ಟರ್ ಪರಮೇಶ್ವರ ನಾಯ್ಕ್ ಬಾಳೆಗುಳಿ, ಜಿ.ಪಂ.ಸದಸ್ಯ ನಾರಾಯಣ ನಾಯ್ಕ್ ಸವಿಹೃದಯದ ಕವಿ ಮಿತ್ರರು ವೇದಿಕೆಯ ಸಂಚಾಲಕ ಸುಭಾμï ಪೆರ್ಲ,ಬಾಲಕೃಷ್ಣ ಏಳ್ಕಾನ,ಸುಂದರ ಬಾರಡ್ಕ,ಚಂದ್ರಹಾಸ ಮಾಸ್ತರ್ ಅರೆಕ್ಕಾಡಿ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜರಗಿದ ಕವಿಗೋಷ್ಠಿಗೆ ಹಿರಿಯ ಸಾಹಿತಿ ಹರೀಶ್ ಪೆರ್ಲ ಚಾಲನೆ ನೀಡಿದರು.ಕವಿಗೋಷ್ಠಿಯಲ್ಲಿ ಸ್ವಾತಿ ಕೆ.ಆರ್.ಕಾರ್ಯಾಡು, ಪೃಥ್ವಿ ಶೆಟ್ಟಿ ಕಾಟುಕುಕ್ಕೆ, ವರೇಣ್ಯ ಬಿ, ನವ್ಯಶ್ರೀ ಸ್ವರ್ಗ,ಮಂಜುಶ್ರೀ ನಲ್ಕ,ಹರ್ಷಿತಾ ಪಿ,ಸುಗಂಧಿ ಮರದಮೂಲೆ,ವೈಷ್ಣವಿ ಎಚ್,ಮೀನಾಕ್ಷಿ ಬೊಡ್ಡೋಡಿ,ರಿತೇಶ್ ಕಿರಣ್ ಕಾಟುಕುಕ್ಕೆ, ಧನ್ಯಶ್ರೀ ಸರಳಿ, ನಿರ್ಮಲ ಶೇಷಪ್ಪ ಖಂಡಿಗೆ, ಸುಜಯ ಎಸ್, ಸಜಂಗದ್ದೆ ಸ್ವರಚಿತ ಸಾಹಿತ್ಯ ವಾಚನ ಗೈದರು.ನಿರ್ಮಲ ಶೇಷಪ್ಪ ಖಂಡಿಗೆ ಸ್ವಾಗತಿಸಿ ರಿತೇಶ್ ಕಿರಣ್ ವಂದಿಸಿದರು.ಜಯ ಮಣಿಯಂಪಾರೆ ನಿರೂಪಿಸಿದರು.