ಕಾಸರಗೋಡು: ಅಬುದಾಬಿಯ ಖ್ಯಾತ ಮದೀನತ್ ಶಾಯಿದ್ ಮಾಲ್‍ನಲ್ಲಿ ಚಟುವಟಿಕೆ ನಡೆಸುತ್ತಿರುವ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಹಾಗೂ ಸಂಸ್ಥೆ ಮುನ್ನಡೆಸುತ್ತಿರುವರನ್ನು ಒಟ್ಟುಗೂಡಿಸಿ ನಡೆಸುವ ಮದೀನತ್ ಶಾಯಿದ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಅಕ್ಟೋಬರ್ 22 ರಂದು ಅಬುದಾಬಿಯ ಶಾಮ ಮುಸಾವಿ ಮೈದಾನದಲ್ಲಿ ನಡೆಯಲಿರುವುದಾಗಿ ಆಯೋಜಕರಲ್ಲಿ ಒಬ್ಬರಾದ ಎ.ಎಂ.ಅಬ್ದುಲ್ ರಹ್ಮಾನ್ ಕಾಸರಗೋಡಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪಂದ್ಯಾಟವನ್ನು ಪ್ರಸಿದ್ಧ ಲುಲು ಗ್ರೂಪ್ ಪ್ರಾಯೋಜಿಸುತ್ತಿದ್ದು, ಆಸ್ಕರ್ ರೈಡರ್ಸ್, ರಾಯಲ್ ಬ್ರದರ್ಸ್, ಜಾಯೆದ್ ಫೈಟರ್ಸ್, ಪ್ಯಾರಿಸ್ ಸ್ಟ್ರೈಕರ್ಸ್ ಮತ್ತು ಟ್ಯಾಸ್ಕೋ ಟೈಟಾನ್ ತಂಡಗಳು ಸೆಣಸಾಡಲಿದೆ. ಪ್ರೀಮಿಯರ್ ಲೀಗ್ ಮೂಲಕ ಸಂಗ್ರಹವಾಗುವ ಮೊತ್ತದಲ್ಲಿ ಶಾಯಿದ್ ಮಾಲ್‍ನಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾಸರಗೋಡು ಜಿಲ್ಲೆ ಸೇರಿದಂತೆ ಕೇರಳದ ಮೂರು ಅತ್ಯಂಣತ ಬಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುವ ಯೋಜನೆಯಿರಿಸಿಕೊಳ್ಳಲಾಗಿದೆ ಎಂದು ತಿಳಿಸಿದರು
ಸುದ್ದಿಗೋಷ್ಠಿಯಲ್ಲಿ ಮೊಹಮ್ಮದ್ ಆಲಂಪಾಡಿ, ಬಶೀರ್ ದರ್ಗಾಸ್, ಕಳನಾಡ್. ಪ್ರೀಮಿಯರ್ ಲೀಗ್ ಸಹ ಸಂಚಾಲಕ ಸಾಜಿದ್ ಮಿಹ್ರಾಜ್ ಮತ್ತು ಝಕಾರಿಯಾ ಬಲೂಶಿ ಉಪಸ್ಥಿತರಿದ್ದರು.
ಬಡ ಕುಟುಂಬಕ್ಕೆ ನೆರವು: ಅಬುದಾಬಿಯಲ್ಲಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ
0
ಅಕ್ಟೋಬರ್ 08, 2022
Tags