ಬದಿಯಡ್ಕ: ಮಕ್ಕಳ ತರಗತಿ ಕೋಣೆಯ ಹೊರಗಿನ ಕಲಿಕೆಯಲ್ಲಿ ಕ್ರೀಡಾಕೂಟವು ಮುಖ್ಯವಾದುದು. ಸೋಲು ಗೆಲುವುಗಿಂತಲೂ ಸ್ಪರ್ಧಾಸ್ಪೂರ್ತಿಯಿಂದ ಭಾಗವಹಿಸುವುದು ಅಗತ್ಯ ಎಂದು ಬದಿಯಡ್ಕ ಗ್ರಾಮ ಪಂಚಾಯಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಅವರು ಅಭಿಪ್ರಾಯಪಟ್ಟರು.
ಪೆರಡಾಲ ಸರ್ಕಾರಿ ಪ್ರೌಢ ಶಾಲೆಯ ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮೊಹಮ್ಮದ್ ಕರೋಡಿ ಅಧ್ಯಕ್ಷತೆವಹಿಸಿದ್ದರು. ಬದಿಯಡ್ಕ ಪೋಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ವಿನೋದ ಕುಮಾರ್ ಮಕ್ಕಳ ಪಥಸಂಚಲನದಲ್ಲಿ ಭಾಗವಹಿಸಿ ಗೌರವವಂದನೆ ಸ್ವೀಕರಿಸಿದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮ, ಸಮಿತಿಯ ಶರೀಫ್ ಉಪಸ್ಥಿತರಿದ್ದರು. ನಾಯಕಿ ಮರಿಯಾ ಸಜ್ನಾ ಸುಲ್ತಾನಾ ಪ್ರತಿಜ್ಞೆ ಬೋಧಿಸಿದಳು. ದೈಹಿಕ ಶಿಕ್ಷಣ ಶಿಕ್ಷಕ ಗೋಪಾಲಕೃಷ್ಣ ಭಟ್ ವಂದಿಸಿದರು. ಎರಡು ದಿನಗಳಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಸಾವಿರಕ್ಕೂ ಹೆಚ್ಚಿನ ಮಕ್ಕಳು ಭಾಗವಹಿಸಿದರು.