ಕಾಸರಗೋಡು: ಜಿಲ್ಲೆಯ ಆರೋಗ್ಯ ಕ್ಷೇತ್ರದ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ತಿರುವನಂತಪುರದ ಸೆಕ್ರೆಟರಿಯೇಟ್ ಎದುರು ಸಾಮಾಜಿಕ ಕಾರ್ಯಕರ್ತೆ ದಯಾಬಾಯಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಕಾಲದ ನಿರಾಹಾರ ಸತ್ಯಾಗ್ರಹಕ್ಕೆ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಆಗ್ರಹಿಸಿದ್ದಾರೆ. ಎಡ ಮತ್ತು ಐಕ್ಯ ರಂಗಗಳು ರಾಜ್ಯದಲ್ಲಿ ಹಲವು ದಶಕಗಳಿಂದ ಅದಲು ಬದಲಾಗಿ ಆಡಳಿತ ನಡೆಸುತ್ತಿರುವುದಲ್ಲದೆ, ಜಿಲ್ಲೆಗೆ ಸ್ವಂತ ಸಚಿವರನ್ನು ಹೊಂದಿದ್ದರೂ, ಇಲ್ಲಿನ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದಿರುವುದು ವಿಷಾದನೀಯ. ಜಿಲ್ಲೆಯ ಸಮಸ್ಯೆ ಮುಂದಿರಿಸಿ ಧರಣಿ ನಡೆಸುತ್ತಿರುವ ದಯಾಬಾಯಿ ಅವರ ಆರೋಗ್ಯದ ಬಗ್ಗೆ ಸರ್ಕಾರ ಕಾಳಜಿ ವಹಿಸಬೇಕು. ಉಪವಾಸ ಸತ್ಯಾಗ್ರಹ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಅವರ ಜೀವ ಉಳಿಸುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ. ಜಿಲ್ಲೆಯ ಶೋಚನೀಯ ಆರೋಗ್ಯ ಪರಿಸ್ಥಿತಿಯನ್ನು ಪರಿಹರಿಸಲು ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ರವೀಶ ತಂತ್ರಿ ಆಗ್ರಹಿಸಿದರು.
ದಯಾಬಾಯಿ ನಿರಾಹಾರ ಸತ್ಯಾಗ್ರಹ: ಸರ್ಕಾರ ಮಧ್ಯಸ್ಥಿಕೆಗೆ ಮುಂದಗಬೇಕು: ರವೀಶ ತಂತ್ರಿ ಕುಂಟಾರು
0
ಅಕ್ಟೋಬರ್ 10, 2022
Tags