ಕುಂಬಳೆ: ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ವೇದಮೂರ್ತಿ ಮಹಾದೇವ ಭಟ್ ಕೋಣಮ್ಮೆ ನೇತೃತ್ವದಲ್ಲಿ ಶಾರದಾ ಪೂಜೆ ನಡೆಯಿತು. ಶಾಲಾಗ್ರಂಥಾಲಯ, ಕಂಪ್ಯೂಟರ್‍ಗಳಿಗೆ, ಶಾಲಾ ವಾಹನಗಳಿಗೆ ಆರತಿಯನ್ನು ಬೆಳಗಲಾಯಿತು. ವಿದ್ಯಾರ್ಥಿಗಳು ಭಜನೆ ಹಾಡಿದರು. ಮುಳ್ಳೇರಿಯ ಹವ್ಯಕ ಮಂಡಲದ ಕುಂಬಳೆ ವಲಯ ಮಹಿಳೆಯರಿಂದ ಶ್ರೀ ಲಲಿತಾ ಸಹಸ್ರನಾಮ ಸಹಿತ ಕುಂಕುಮಾರ್ಚನೆ, ಮಹಿಳೆಯರಿಂದ ಸೌಂದರ್ಯ ಲಹರಿ ಪಾರಾಯಣ ನಡೆಯಿತು. ವಿದ್ಯಾರ್ಥಿಗಳು, ಶಿಕ್ಷಕರು, ರಕ್ಷಕರು, ಕುಂಬಳೆ ಹವ್ಯಕ ವಲಯದ ಪದಾಧಿಕಾರಿಗಳು, ಸದಸ್ಯರು, ಊರವರು ಪಾಲ್ಗೊಂಡಿದ್ದರು.
ಮುಜುಂಗಾವು ವಿದ್ಯಾಪೀಠದಲ್ಲಿ ವಿಜಯದಶಮಿ ಪೂಜೆ
0
ಅಕ್ಟೋಬರ್ 09, 2022
Tags