ಮಂಜೇಶ್ವರ: ಮಾದಕವಸ್ತುಮುಕ್ತ ಕೇರಳ ಅಭಿಯಾನದ ಅಂಗವಾಗಿ ವಾಮಂಜೂರು ಸÀರ್ಕಾರಿ ಎಲ್‍ಪಿ ಶಾಲೆಯಲ್ಲಿ ರಕ್ಷಕರಿಗೆ ತರಬೇತಿ ಕಾರ್ಯಕ್ರಮ ನಡೆಯಿತು. ಮುಖ್ಯಮಂತ್ರಿಯವರ ರಾಜ್ಯಮಟ್ಟದ ಉದ್ಘಾಟನಾ ಭಾಷಣವನ್ನು ಆಲಿಸುವ ವ್ಯವಸ್ಥೆ ಮಾಡಲಾಯಿತು. ಮಂಜೇಶ್ವರ ಪಂಚಾಯಿತಿ ಸದಸ್ಯ ಆದರ್ಶ್ ಬಿ. ಎಂ., ಶಾಲಾಮಟ್ಟದ ಮಾದಕವಸ್ತು ಮುಕ್ತ ಕೇರಳ ಕಾರ್ಯಕ್ರಮವನ್ನು ಉದ್ಘಾಟಿಸಿ, ರಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾದಕವಸ್ತುವಿನ ದುಷ್ಪರಿಣಾಮ, ರಕ್ಷಕರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳುವಳಿಕೆ ಮೂಡಿಸಿದರು.
ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಅಮೀರ್ ಹಂಝ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಲಾಂ ಕಡಂಬಾರು, ರಕ್ಷಕ-ಶಿಕ್ಷಕ ಸಂಘದ ಮಾಜಿ ಅಧ್ಯಕ್ಷ ಹಾರೀಸ್ ಮಾತನಾಡಿದರು. ರಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅಧ್ಯಾಪಕರಾದ ಸೌಮ್ಯ, ಬೀಫಾತಿಮ, ಶೋಭಾ ಕೆ. ತರಗತಿ ನಡೆಸಿದರು. ಝೌರ ಮಾದಕವಸ್ತು ವಿರೋ ವೀಡಿಯೋ ಪ್ರದರ್ಶಿಸಿದರು. ಪ್ರಚಲಿತ ಮಾದಕವಸ್ತುಗಳ ಬಗ್ಗೆ ರಕ್ಷಕರಿಗೆ ಜಾಗೃತಿ ಮೂಡಿಸಲಾಯಿತು. ಮುಖ್ಯೋಪಾಧ್ಯಾಯಿನಿ ಸಿಲ್ವಿಯಾ ಮೊಂತೆರೋ ಪ್ರಾಸ್ತಾವಿಕ ಭಾಷಣ ಮಾಡಿ ಸ್ವಾಗತಿಸಿದರು. ಅಧ್ಯಾಪಿಕೆ ಶೋಭಾ ವಂದಿಸಿದರು.
ವಾಮಂಜೂರು ಶಾಲೆಯಲ್ಲಿ ಮಾದಕವಸ್ತುಮುಕ್ತ ಕೇರಳ ರಕ್ಷಕರಿಗೆ ತರಬೇತಿ
0
ಅಕ್ಟೋಬರ್ 08, 2022
Tags