ತಿರುವನಂತಪುರ: ಹಿಂದೂ ಮಹಿಳೆಯರನ್ನು ಟೀಕಿಸಿದ ವಿವಾದಿತ ಕಾದಂಬರಿಗೆ ರಾಜ್ಯ ಸರ್ಕಾರ ಪ್ರಶಸ್ತಿ ನೀಡಿರುವುದು ವ್ಯಾಪಕ ಟೀಕೆಗೊಳಗಾಗುತ್ತಿದೆ.
46ನೇ ವಯಲಾರ್ ರಾಮವರ್ಮ ಸ್ಮಾರಕ ಸಾಹಿತ್ಯ ಪ್ರಶಸ್ತಿಯನ್ನು ಎಸ್ ಹರೀಶ್ ಅವರ ಮೀಶಾ ಕಾದಂಬರಿಗೆ ನೀಡಲಾಗಿದ್ದು, ವಿವಾದಕ್ಕೀಡಾಗಿದೆ. ಘಟನೆಯ ವಿರುದ್ಧ ಹಿಂದೂ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿವೆ.
ಪೆರುಂಬದವಂ ಶ್ರೀಧರನ್ ಅವರ ಅಧ್ಯಕ್ಷತೆಯ ಸಮಿತಿಯು ಪ್ರಶಸ್ತಿ ಪ್ರಕಟಿಸಿದೆ. ಮೀಶಾ ವಿಭಿನ್ನ ಬರವಣಿಗೆಯ ಶೈಲಿ ಮತ್ತು ರಚನೆಯನ್ನು ಹೊಂದಿರುವ ಕೃತಿಯಾಗಿದ್ದು, ಕಾದಂಬರಿಯ ಸುತ್ತಲಿನ ವಿವಾದಗಳು ಅತ್ಯಲ್ಪವೆಂದು ತೀರ್ಪುಗಾರರ ಸದಸ್ಯರು ಅಭಿಪ್ರಾಯಪಟ್ಟರು. ಇದಾದ ನಂತರ ಮೀಶಾಗೆ ಪ್ರಶಸ್ತಿ ಘೋಷಿಸಲಾಯಿತು.
ಈ ಹಿಂದೆ, ಹಿಂದೂ ಮಹಿಳೆಯರನ್ನು ವ್ಯಂಗ್ಯ ಮಾಡಿದ ಈ ಕಾದಂಬರಿಗಾಗಿ ರಾಜ್ಯ ಸರ್ಕಾರ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸಹ ನೀಡಿತ್ತು.
ಮಾತೃಭೂಮಿಯಲ್ಲಿ ಪ್ರಕಟವಾದ ಕಾದಂಬರಿಯಲ್ಲಿ ಮಹಿಳೆಯರು ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವ ಉಲ್ಲೇಖ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಪುರೋಹಿತರು ಮತ್ತು ಮಹಿಳೆಯರನ್ನು ಅವಮಾನಿಸುವ ಕಾದಂಬರಿಯ ವಿರುದ್ಧ ಹಿಂದೂ ಸಂಘಟನೆಗಳು ತೀವ್ರ ಪ್ರತಿಭಟನೆಗಳನ್ನು ನಡೆಸಿದ್ದವು. ಇದರ ಬೆನ್ನಲ್ಲೇ ಮಾತೃಭೂಮಿಯಲ್ಲಿ ಕಾದಂಬರಿಯ ಪ್ರಕಟಣೆಯನ್ನು ನಿಲ್ಲಿಸಲಾಯಿತು.‘ಮೀಶಾ’ ಕಾದಂಬರಿಯನ್ನು ಪ್ರಕಟಿಸಿದ್ದಕ್ಕಾಗಿ ಮಾತೃಭೂಮಿ ಆಡಳಿತವು ಎನ್‍ಎಸ್‍ಎಸಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದೆ.
ಪುಸ್ತಕ ಬಿಡುಗಡೆಯಾದ ನಂತರವೂ ತೀವ್ರ ಟೀಕೆ ವ್ಯಕ್ತವಾಗಿತ್ತು. ಇದರ ನಂತರ ಮೀಶಾ ಕಾದಂಬರಿಯನ್ನು ಮತ್ತೆ ವಯಲಾರ್ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಇದು ಹಿಂದೂ ಸಂಪ್ರದಾಯಗಳ ಮೇಲೆ ಸರ್ಕಾರದ ನಿರಂತರ ಅತಿಕ್ರಮಣವಾಗಿದೆ ಎಂದು ಹಿಂದೂ ಸಂಘಟನೆಗಳು ದೂರಿವೆ.
ಹಿಂದೂ ಮಹಿಳೆಯರನ್ನು ಕೆಣಕಿದ 'ಮೀಶಾ'ಕ್ಕೆ ಪ್ರಶಸ್ತಿ; ಹಿಂದೂ ಸಂಘಟನೆಗಳಿಂದ ತೀವ್ರ ಪ್ರತಿಭಟನೆ
0
ಅಕ್ಟೋಬರ್ 08, 2022
Tags