ಕಾಸರಗೋಡು: ಯುವ ಜನತೆಯಲ್ಲಿ ಕಲಾತ್ಮಕ ಅಭಿರುಚಿಯನ್ನು ಬೆಳೆಸಲು ನೆಹರು ಯುವ ಕೇಂದ್ರ ಯುವ ಉತ್ಸವ ಜಿಲ್ಲಾ ಸ್ಪರ್ಧೆ ಆಯೋಜಿಸಲಾಯಿತು. ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಸಹಯೋಗದಲ್ಲಿ ಪಡನ್ನಕ್ಕಾಡ್ ನೆಹರು ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ ಉದ್ಘಾಟಿಸಿದರು.
ನೆಹರು ಕಲಾ ಮತ್ತು ವಿಜ್ಞಾನ ಕಾಲೇಜು ಪ್ರಭಾರ ಪ್ರಾಂಶುಪಾಲ ಡಾ.ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ಮರಿಮಾಯಂ ಖ್ಯಾತಿಯ ಉಣ್ಣಿರಾಜ್ ಚೆರುವತ್ತೂರು ಮುಖ್ಯ ಅತಿಥಿಯಾಗಿದ್ದರು. ಎನ್ ಎಸ್ ಎಸ್ ಸಂಯೋಜಕ ವಿ.ವಿಜಯಕುಮಾರ್ , ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಡಾ.ಎಸ್ .ವಿನೀಶ್ ಕುಮಾರ್, ನೆಹರೂ ಯುವಕೇಂದ್ರ ಸುರಕ್ಷಾ ಯೋಜನಾಧಿಕಾರಿ ಶ್ರೀಜಿತ್ ಉಪಸ್ಥಿತರಿದ್ದರು. ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಅಖಿಲ್ ಸ್ವಾಗತಿಸಿದರು. ಲೆಕ್ಕಪತ್ರ ಮತ್ತು ಕಾರ್ಯಕ್ರಮ ಮೇಲ್ವಿಚಾರಕಿ ಅನ್ನಮ್ಮ ವಂದಿಸಿದರು.ಆರು ಸ್ಪರ್ಧೆಗಳಲ್ಲಿ ಜಿಲ್ಲೆಯ ವಿವಿಧೆಡೆಯಿಂದ 400ಕ್ಕೂ ಹೆಚ್ಚು ಮಹಿಳೆಯರು ಹಾಗೂ ಪುರುಷರು ಪಾಲ್ಗೊಂಡಿದ್ದರು. ಇದೇ ಮೊದಲ ಬಾರಿಗೆ ನೆಹರು ಯುವ ಕೇಂದ್ರ ವತಿಯಿಂದ ಯುವತಿಯರು ಮತ್ತು ಯುವಕರಿಗಾಗಿ ಆರಕ್ಕೂ ಹೆಚ್ಚು ಸ್ಪರ್ಧೆಗಳನ್ನು ಆಯೋಜಿಸಿದೆ. ಅಕ್ಟೋಬರ್ ತಿಂಗಳಿನಲ್ಲಿ ಭಾರತದಾದ್ಯಂತ ಯುವ ಉತ್ಸವವನ್ನು ಆಚರಿಸಲಾಗುತ್ತದೆ. ಯುವಕರ ಕಲೆ ಮತ್ತು ಸಾಂಸ್ಕøತಿಕ ಚಟುವಟಿಕೆಗಳನ್ನು ಪೆÇ್ರೀತ್ಸಾಹಿಸುವ ಉದ್ದೇಶದೊಂದಿಗೆ ಕವನ ರಚನೆ, ಭಾಷಣ, ಛಾಯಾಗ್ರಹಣ, ಚಿತ್ರಕಲೆ, ಯುವ ಚರ್ಚಾಸ್ಪರ್ಧೆ ಮತ್ತು ಜಾನಪದ ನೃತ್ಯ ಗುಂಪಿನಲ್ಲಿ ಸ್ಪರ್ಧೆ ನಡೆಸಲಾಯಿತು. ವಿಜೇತರು ನಗದು ಪ್ರಶಸ್ತಿ, ಪ್ರಮಾಣಪತ್ರ ಮತ್ತು ರಾಜ್ಯ ಮಟ್ಟದಲ್ಲಿ ಭಾಗವಹಿಸುವ ಅವಕಾಶವನ್ನು ಪಡೆಯುತ್ತಾರೆ.
ಯುವಕರಲ್ಲಿ ಕಲಾಭಿರುಚಿ ಮೂಡಿಸುವ ನಿಟ್ಟಿನಲ್ಲಿ ನೆಹರೂ ಯುವಕೇಂದ್ರದಿಂದ ಯುವ ಉತ್ಸವ
0
ಅಕ್ಟೋಬರ್ 16, 2022
Tags