ಕಾಸರಗೋಡು: ಜಿಲ್ಲೆಯ ಪ್ರವಾಸಿ ಭೂಪಟದಲ್ಲಿ ಚಂದ್ರಗಿರಿಕೋಟೆಯನ್ನು ಉತ್ತಮ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಬಂದರು ವಸ್ತು ಸಂಗ್ರಹಾಲಯ, ಮತ್ತು ಪ್ರಾಚ್ಯವಸ್ತು ಖಾತೆ ಸಚಿವ ಅಹ್ಮದ್ ದೇವರಕೋವಿಲ್ ತಿಳಿಸಿದ್ದ್ದಾರೆ.
ಪ್ರವಾಸೋದ್ಯಮ ಅಭಿವೃದ್ಧಿ ಚಟುವಟಿಕೆಗಳ ಅನುಷ್ಠಾನದ ಅಂಗವಾಗಿ ಸಚಿವರು ಗುರುವಾರ ಚಂದ್ರಗಿರಿ ಕೋಟೆಗೆ ಭೇಟಿನೀಡಿ ಅವಲೋಕನ ನಡೆಸಿದರು.
ಕೋಟೆಯು ಅತ್ಯಂತ ಸದೃಢವಾಗಿದ್ದು, ಸಂರಕ್ಷಿತ ಸ್ಮಾರಕವನ್ನಾಗಿಸುವ ಕಾಮಗಾರಿಯನ್ನು ಕೈಗೊಳ್ಳಲಾಗುವುದು. ಪುರಾತತ್ವ ಇಲಾಖೆಯಡಿ ಚಂದ್ರಗಿರಿ ಕೋಟೆಯಲ್ಲಿ ಹೆಚ್ಚಿನ ಪ್ರವಾಸೋದ್ಯಮ ಅವಕಾಶಗಳನ್ನು ಕಮಡುಕೊಂಡು ಇದನ್ನು ಅನುಷ್ಠಾನಗೊಳಿಸಲಾಗುವುದು. ಇದಕ್ಕಾಗಿ ಜಿಲ್ಲಾ ಪ್ರವಾಸೋದ್ಯಮ ಉತ್ತೇಜನಾ ಮಂಡಳಿಯು ಪುರಾತತ್ವ ಇಲಾಖೆಯೊಂದಿಗೆ ಎಂಒಯುಗೆ ಸಹಿ ಹಾಕಲಿದೆ ಎಂದು ಸಚಿವರು ತಿಳಿಸಿದರು. ಕೋಟೆಯ ಸ್ಥಳವನ್ನು ಅಳತೆಮಾಡಿ ಗಡಿ ನಿರ್ಧರಿಸುವುದು ಮೊದಲ ಹಂತವಾಗಿದೆ. ಇದಕ್ಕಾಗಿ ಕೋಟೆ ಸುತ್ತಲಿನ ಕುರುಚಲುಕಾಡನ್ನು ತೆರವುಗೊಳಿಸಲಾಗುವುದು. 7.67ಎಕರೆ ಪ್ರದೇಶದಲ್ಲಿ ವಯಾಪಿಸಿರುವ ಚಂದ್ರಗಿರಿ ಕೋಟೆಯು ಉತ್ತಮ ಪ್ರವಾಸೋದ್ಯಮ ಸಾಮಥ್ರ್ಯವನ್ನು ಹೊಂದಿದೆ. ಪ್ರವಾಸಿಗರು ಕೋಟೆಯ ಸುತ್ತಲೂ ನಡೆದಾಡಿ, ಕಾಸರಗೋಡು ನಗರದ ಸುಂದರ ದೃಶ್ಯಾವಳಿ, ಮಾಲಿಕ್ ದಿನಾರ್ ಪ್ರದೇಶ ಮತ್ತು ಚಂದ್ರಗಿರಿ ಹೊಳೆಯ ಸೊಬಗನ್ನು ಕೋಟೆಯಿಂದ ಆಸ್ವಾದಿಸಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಉತ್ತಮ ಪ್ರವಾಸೋದ್ಯಮ ತಾಣವಾಗಿ ಚಂದ್ರಗಿರಿ ಕೋಟೆ ಅಭಿವೃದ್ಧಿ: ಸಚಿವ ಅಹಮದ್ ದೇವರಕೋವಿಲ್
0
ಅಕ್ಟೋಬರ್ 28, 2022