ಬದಿಯಡ್ಕ : ಡಾ.ವಾಣಿಶ್ರೀ ಕಾಸರಗೋಡು ಸಾರಥ್ಯದ ಕಾಸರಗೋಡಿನ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕøತಿಕ ಸಂಘ ಸಂಸ್ಥೆಯ ಆಶ್ರಯದಲ್ಲಿ ಕಾಸರಗೋಡು ಜಿಲ್ಲೆಯ ವಿವಿಧೆಡೆ ನವರಾತ್ರಿಯ ಅಂಗವಾಗಿ ವಿಶೇಷ ಗಾನ ನೃತ್ಯ ವೈಭವ ಕಾರ್ಯಕ್ರಮಗಳು ನಡೆದುವು.
ವರ್ಕಾಡಿಯ ಕೂಟತ್ತಜೆ ಉಳ್ಳಾಳ್ತಿ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರದ ಮೊಕ್ತೇಸರ ಶೈಲೇಂದ್ರ ಭರತ್ ನಾಯ್ಕ್, ಬಾಲಕೃಷ್ಣ ಶೆಟ್ಟಿ ಪಾವಳ, ಲೋಕೇಶ್ ಪೂಜಾರಿ ಕೂಟತ್ತಜೆ, ಹರೀಶ್ ಜೋಗಿ ಕೂಟತ್ತಜೆ, ತಾರಾನಾಥ ಕೂಟತ್ತಜೆ ಮೊದಲಾದವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕವಿಗಳಾದ ವೆಂಕಟೇಶ್ ಗಟ್ಟಿ ಅವರನ್ನು ಸನ್ಮಾನಿಸಲಾಯಿತು. ನೃತ್ಯ ನಿರ್ಧೇಶಕಿ ಸುಷ್ಮಾ ವರ್ಕಾಡಿ, ಶಶಿಕಲಾ ಬಾಕ್ರಂಬೈಲು ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸುಹಾಸಿನಿ ಗಟ್ಟಿ ಕೂಟತ್ತಜೆ ಅವರು ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಪ್ರಕೃತಿ ಕಲಾ ಗೌರವ ಪುರಸ್ಕಾರ ನೀಡಿ ಗೌರವಿಸಿದರು.
ಉಡುಪಿಯ ಕಡಿಯಾಳಿ, ಕುಂಭಾಶಿ ಕ್ಷೇತ್ರ, ಕಾಸರಗೋಡು ಜಿಲ್ಲೆಯ ಕುಂಜರಕಾನ ದುರ್ಗಾಪರಮೆಶ್ವರಿ ಕ್ಷೇತ್ರ, ಮಧೂರಿನ ಕಾಳಿಕಾಂಬಾ ಕ್ಷೇತ್ರ ಹಾಗೂ ಮಲ್ಲದ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಈ ತಂಡದ ಸದಸ್ಯರಿಂದ ಕಾರ್ಯಕ್ರಮ ವೈವಿಧ್ಯ ನಡೆಯಿತು. ನಲ್ಕದ ವಾಗ್ದೇವಿ ಭಜನಾ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಸುಭಾಷ್ ಪೆರ್ಲರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಸತೀಶ್ ಕುಲಾಲ್ ನಲ್ಕ ಉಪಸ್ಥಿತರಿದ್ದರು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಂಘಟನೆಯ ಕಲಾವಿದರಾದ ವಿಜಿತಾ ಕೇಶವನ್ ಹರೀಶ್ ಪಂಜಿಕಲ್ಲು, ಆದ್ಯಂತ್ ಅಡೂರು, ಭಾಸ್ಕರ ಅಡೂರು, ಆರಾಧ್ಯ ಎಸ್ ರೈ ಕಾಟುಕುಕ್ಕೆ, ನಿಹಾರಿಕಾ ಕಾಟುಕುಕ್ಕೆ, ತೇಜಸ್ವಿನಿ ಧನ್ಯಶ್ರೀ, ಹರಿತ ಕುಮಾರಿ, ಸಂಧ್ಯಾ, ಉಮಾವತಿ, ಸುಶ್ಮಿತಾ, ಅಹನಾ ಎಸ್ ರಾವ್, ಸನೂಷಾ ಸುನಿಲ್, ಉಷಾ ಸುಧಾಕರನ್, ಸನೂಷಾ ಸುಧಾಕರನ್, ನಂದನ, ನಂದಿನಿ ವರ್ಕಾಡಿ ಮೊದಲಾದವರು ಭಾಗವಹಿಸಿದ್ದರು. ಸಂಘಟನೆಯ ಕಾರ್ಯದರ್ಶಿ ಗುರುರಾಜ್ ಎಂ ಆರ್ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು.
ವಿವಿಧೆಡೆ ನವರಾತ್ರಿ ಗಾನನೃತ್ಯ ವೈಭವ
0
ಅಕ್ಟೋಬರ್ 08, 2022
Tags