ಕೇರಳ ಇದೀಗ ಮತ್ತೆ ಭಯಭೀತಿಯ ತಾಣವಾಗಿದೆ. ನಮ್ಮ ಹಿರಿಯರು ಹೇಳುವಂತೆ ಕೇರಳೀಯರು(ಮುಖ್ಯವಾಗಿ ದಕ್ಷಿಣ ಕೇರಳ) ಹಿಂದಿನಿಂದಲೂ ಕೇರಳ ಪೈಶಾಚಿಕ, ಆಭಿಚಾರ ಕ್ರಿಯೆಗಳಿಗೆ ಕೇರಳ ಕುಪ್ರಸಿದ್ದ. ಆದರೆ ವಿದ್ಯಾಭ್ಯಾಸ, ವಿವಿಧ ಕ್ಷೇತ್ರಗಳ ಸಾಧನೆ, ಕಮ್ಯುನಿಸ್ಟ್ ಹೋರಾಟಗಳು ಅವೆಲ್ಲವನ್ನು ಹೊಸಕಿ ಹಾಕಿತೆಂಬ ವಾದ ಹುರುಳಿಲ್ಲದ್ದೆಂಬುದು ಸಾಬೀತಾಗುತ್ತಿದೆ. ಎಷ್ಟೆಂದರೂ ಹುಟ್ಟುಗುಣ…….
ಕೇರಳದಲ್ಲಿ ದೇವರ ಕೃಪೆಗಾಗಿ ತಾಯಿಯೊಬ್ಬಳು ತನ್ನ ಮಗನನ್ನು ಕತ್ತು ಸೀಳಿ ಕೊಂದ ಘಟನೆ ಪ್ರಾಚೀನವಾದುದೇನೂ ಅಲ್ಲ. ತಂದೆ ಮತ್ತು ಸಹೋದರಿಯೊಂದಿಗೆ ಹದಿಹರೆಯದ ಯುವಕನನ್ನು ಸ್ವತಃ ತಾಯೀಯೇ ಬಲಿಕೊಟ್ಟ ನಾಡು ಕೇರಳ.
ಸಂಪತ್ತು ಮತ್ತು ಆರ್ಥಿಕ ಸಮೃದ್ಧಿ ಪಡೆಯಲು ಇಬ್ಬರು ಅಮಾಯಕ ಮಹಿಳೆಯರನ್ನು ಕೊಂದಿರುವುದು ಮಲಯಾಳಿಗಳನ್ನು ಬೆಚ್ಚಿ ಬೀಳಿಸಿದೆ. ಹೈಕು ಕವಿ ಮತ್ತು ವೈದ್ಯ ಭಗವಾಲ್ ಸಿಂಗ್, ಅವರ ಪತ್ನಿ ಲೈಲಾ ಮತ್ತು ಶಫಿ ಪೈಶಾಚಿಕ ಕ್ರೂರ ಕೃತ್ಯದ ಹಿಂದೆ ಇದ್ದಾರೆ. ಭಗವಾಲ್ ಸಿಂಗ್ ಮತ್ತು ಆತನ ಪತ್ನಿಗೆ ನರಬಲಿ ಮಾಡಲು ಪ್ರೋತ್ಸಾಹಿಸಿದವನು ಶಿಹಾಬ್ ಅಲಿಯಾಸ್ ಮುಹಮ್ಮದ್ ಶಫಿ ಎಂದು ಪೋಲೀಸರು ಕಂಡುಕೊಂಡಿದ್ದಾರೆ. ತಿರುವಲ್ಲಾದಲ್ಲಿ ಇದು ಮೊದಲ ಘಟನೆಯಲ್ಲ. ಕೇರಳದಲ್ಲಿ ಈ ಹಿಂದೆಯೂ ಅಮಾನುಷ ನರಬಲಿಗಳು ವರದಿಯಾಗಿದ್ದವು. ಕೇರಳದಲ್ಲಿ ಹದಿಹರೆಯದ ಯುವಕನನ್ನು ಅವನ ತಂದೆ ಮತ್ತು ಸಹೋದರಿ ಮತ್ತು ತಾಯಿಯು ದೇವರನ್ನು ಮೆಚ್ಚಿಸಲು ತನ್ನ ಮಗನನ್ನು ಬಲಿಕೊಟ್ಟರು.
ಸೋಫಿಯಾ ಸಾವು:
1981ರಲ್ಲಿ ಆದಿಮಲಿಯ ಪನಮಕುಟ್ಟಿಯಲ್ಲಿ ಸೋಫಿಯಾ ಕೊಲೆಯಾಗಿದ್ದರು. ಇದು ಇಡುಕ್ಕಿಯಲ್ಲಿ ನಡೆದ ಆಘಾತಕಾರಿ ಘಟನೆ. ಪತಿ ಹಾಗೂ ಸಂಬಂಧಿಕರ ನೆರವಿನಿಂದ ಈ ಕ್ರೂರ ಕೃತ್ಯ ನಡೆದಿದೆ. ಸೋಫಿಯಾಳ ದೇಹವನ್ನು ಸಮಾಧಿ ಮಾಡಿದ ನಂತರ, ಸಾಕ್ಷ್ಯವನ್ನು ನಾಶಮಾಡಲು ಸಗಣಿ ಸಾರಿಸಲಾಗಿತ್ತು. ಈ ವಿಷಯ ಸ್ಥಳೀಯರ ಗಮನಕ್ಕೆ ಬಂದು ರಾಕ್ಷಸ ಕೃತ್ಯ ಜಾಹೀರುಗೊಂಡಿತ್ತು.
ಎರಡನೇ ಘಟನೆಯಲ್ಲಿ ಒಂಬತ್ತನೇ ತರಗತಿ ವಿದ್ಯಾರ್ಥಿಯನ್ನು ಅಕ್ಕನ ದೆವ್ವ ಬಿಡಿಸಲು ತಂದೆ, ಸಹೋದರಿ ಹಾಗೂ ನೆರೆಹೊರೆಯವರು ಸೇರಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಇದು ಜುಲೈ 1983 ರಲ್ಲಿ ಇಡುಕ್ಕಿಯ ಮುಂಡಿಯಾರುಮಾದಲ್ಲಿ ನಡೆದ ಘಟನೆ. ಕಣ್ಣು ಮತ್ತು ಮೂಗು ಚುಚ್ಚಿದ ಸ್ಥಿತಿಯಲ್ಲಿ ಮಗುವಿನ ದೇಹ ಪತ್ತೆಯಾಗಿತ್ತು.
ರಾಮಕಲ್ಮೇಟ್ ನಲ್ಲಿ ನಡೆದ ಘಟನೆ:
ಮೂಢನಂಬಿಕೆಯ ಹೆಸರಿನಲ್ಲಿ ನಡೆದ ಮೂರನೇ ಕೊಲೆಯೂ ಇಡುಕ್ಕಿಯದ್ದೇ. ಇದು 1995 ರಲ್ಲಿ ರಾಮಕಲ್ಮೆಟ್ನಲ್ಲಿ ನಡೆಯಿತು. ತಂದೆ ಮತ್ತು ಮಲತಾಯಿ ಶಾಲಾ ಬಾಲಕನನ್ನು ವಾಮಾಚಾರದ ತಂಡಕ್ಕೆ ನೀಡಿದ್ದರು. ಅಮಾನುಷವಾಗಿ ಥಳಿಸಿದ್ದರಿಂದ ಮಗು ಸಾವನ್ನಪ್ಪಿದೆ. ತಮಿಳುನಾಡಿನ ಮಾಟಗಾತಿಯರ ತಂಡ ಈ ಕೊಲೆಯ ಹಿಂದೆ ಇತ್ತು. ಶವ ಪತ್ತೆಯಾದಾಗ ಮಗುವಿನ ದೇಹ ಛಿದ್ರವಾಗಿತ್ತು.
ಕಂಪಕಕಾನಂನಲ್ಲಿ ಹತ್ಯಾಕಾಂಡ
ಜುಲೈ 2018 ರಲ್ಲಿ, ಕೇರಳದಲ್ಲಿ ಮತ್ತೊಂದು ನರಬಲಿ ಇಡುಕ್ಕಿಯ ಕಂಬಕಕಾನಂನಲ್ಲಿ ನಡೆಯಿತು. ಮೊದಲ ಆರೋಪಿ ಅನೀಶ್, ಎರಡನೇ ಆರೋಪಿ ಲಿಬೀಶ್ ಸಹಾಯದಿಂದ ಮಾಂತ್ರಿಕ ಶಕ್ತಿಯನ್ನು ಪಡೆಯುವ ಸಲುವಾಗಿ ಒಂದೇ ಕುಟುಂಬದ ನಾಲ್ವರನ್ನು ನಿರ್ದಯವಾಗಿ ಕೊಲ್ಲಲಾಗಿತ್ತು. ಕೃಷ್ಣನ್, ಅವರ ಪತ್ನಿ ಸುಶೀಲಾ ಮತ್ತು ಅವರ ಮಕ್ಕಳಾದ ಆμರ್Á ಮತ್ತು ಅರ್ಜುನ್ ಕಣ್ಣಾಟ್ ಮನೆಯಲ್ಲಿ ಕೊಲ್ಲಲ್ಪಟ್ಟರು. ತಲೆಗೆ ಹೊಡೆದು, ಕತ್ತರಿಸಿ, ಇರಿದು ಕೊಲೆ ಮಾಡಲಾಗಿತ್ತು. ಮೃತ ದೇಹಗಳನ್ನು ಸಗಣಿ ಹೊಂಡದಲ್ಲಿ ಮುಚ್ಚಲಾಗಿತ್ತು. ಕೃಷ್ಣನ ಬ್ಲ್ಯಾಕ್ ಮ್ಯಾಜಿಕ್ ನಲ್ಲಿ ಅನೀಶ್ ಸಹಾಯಕನಾಗಿದ್ದ. ನಂತರ ಅವರು ಬೇರೆಯಾದರು. ಕೃಷ್ಣನನ್ನು ಕೊಂದರೆ ಅಧಿಕಾರ ಸಿಗುತ್ತದೆ ಎಂದು ಅನೀಶ್ ನಂಬಿದ್ದ. ಹತ್ಯೆಗೀಡಾದ ಅರ್ಜುನ್ ವಿಭಿನ್ನ ಸಾಮಥ್ರ್ಯ ಹೊಂದಿದ್ದ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಗುವನ್ನು ಜೀವಂತ ಸಮಾಧಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ತುμÁರ ಕೊಲೆ:
ಕೊಲ್ಲಂನ ಕರುನಾಗಪಳ್ಳಿಯಲ್ಲಿ 2019 ರಲ್ಲಿ ತುμÁರನನ್ನು ಕೊಲ್ಲಲಾಯಿತು. ಆಹಾರವಿಲ್ಲದೆ ತುμÁರಾ ಹತ್ಯೆಯಾದಾಗ ಮಹಿಳೆಯ ತೂಕ ಕೇವಲ 20 ಕೆ.ಜಿ. ತುμÁರಾಗೆ ಆಕೆಯ ಅತ್ತೆ ಮತ್ತು ಆಕೆಯ ಪತಿ ಸಕ್ಕರೆ ಮತ್ತು ನೆನೆಸಿದ ಅಕ್ಕಿಯನ್ನು ಮಾತ್ರ ನೀಡಿದ್ದರು. ಇದು ಮಾಂತ್ರಿಕನ ಆಜ್ಞೆಯ ಮೇರೆಗೆ ಎಂದು ನಂತರ ಸ್ಪಷ್ಟವಾಯಿತು. ಈ ಮನೆ ವಾಮಾಚಾರದ ಶಾಶ್ವತ ಕೇಂದ್ರವಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ವರದಕ್ಷಿಣೆ ಕಿರುಕುಳದಿಂದ ತುμÁರಾ ಸಾವನ್ನಪ್ಪಿದ್ದಾಳೆ ಎಂಬುದು ಮೊದಲ ಮಾಹಿತಿ.
ಪುದುಪಳ್ಳಿತೇರು ಘಟನೆ:
2021 ರಲ್ಲಿ, ಪಾಲಕ್ಕಾಡ್‍ನ ಪುದುಪಳ್ಳಿತೇರು ಎಂಬಲ್ಲಿ ದೇವರನ್ನು ಮೆಚ್ಚಿಸಲು ತಾಯಿಯೊಬ್ಬಳು ತನ್ನ ಮಗನನ್ನು ಕತ್ತು ಸೀಳಿ ಬರ್ಬರವಾಗಿ ಕೊಂದಿದ್ದಳು. ಪುದುಪಳ್ಳಿತೇರು ನಿವಾಸಿ ಶಾಹಿದಾ ತನ್ನ ಆರು ವರ್ಷದ ಮಗನನ್ನು ಹರಿತವಾದ ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದಾಳೆ. ಮಗನನ್ನು ಬಾತ್ ರೂಮಿಗೆ ಕರೆದೊಯ್ದ ಬಳಿಕ ಆತನ ಕಾಲುಗಳನ್ನು ಕಟ್ಟಿ ಕುತ್ತಿಗೆ ಕೊಯ್ಯಲಾಗಿತ್ತು.
ಮಿಕ್ಕುಳಿದಂತೆ ಕಾಸರಗೋಡಿನ ದೇವಲೋಕ ಪ್ರಕರಣ ನಮಗೆ ಗೊತ್ತೇ ಇದೆ. ಹೀಗೆ ಅರಿವಿಗೆ ಬಾರದ ಪ್ರಕರಣಗಳೆಷ್ಟೋ ಎಂದು ಭಾವಿಸಿದಾಗ ಕ್ರೋಧ, ನಾಚಿಗೇಡಿತನ, ಮತ್ತಿನ್ನೇನೋ ಭಾವಗಳು ನಮ್ಮನ್ನು ಆಕ್ರಮಿಸಿಕೊಳ್ಳುತ್ತದೆ. ಮಾನವೀಯತೆ, ಲೋಭ, ವ್ಯಾಮೋಹಗಳ ಸುಳಿಯಿಂದ ಪಾರಾಗದ ಹೊರತು ಪಿ.ಎಚ್ ಡಿ ವರೆಗಿನ ವಿದ್ಯಾಭ್ಯಾಸದಿಂದಲೂ ಏನೂ ಮಾಡಲಾಗದು. ಕ್ರಾಂತಿ ಹೃದಯದಿಂದ ಏಳಬೇಕೇ ಹೊರತು ಪಕ್ಷ, ಸಂಘಟನೆಗಳಿಂದಲ್ಲ ಎಂಬುದೂ ನಿರ್ವಿವಾದ.
ಪಿ.ಎಚ್.ಡಿ ವರೆಗಿನ ಶಿಕ್ಷಣ, ಪಕ್ಷ-ಸಂಘಟನೆಗಳಿಂದಲ್ಲ ಕ್ರಾಂತಿ: ಇಡುಕ್ಕಿ ಕೇಂದ್ರವಾಗಿ ಪೈಶಾಚಿಕ ಹತ್ಯೆಗಳು; ಕೇರಳ ನಡುಗಿಸಿದ ನರಬಲಿ ಚರಿತ್ರೆ
0
ಅಕ್ಟೋಬರ್ 13, 2022
Tags