ಪುತ್ತೂರು/ಕಾಸರಗೋಡು: ತಂತ್ರಿವರ್ಯ, ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ಕುಂಟಾರು ರವೀಶ ತಂತ್ರಿ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದು, ಆಸ್ಪತ್ರೆ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾರೆ.
ತಂತ್ರಿಗಳಿಗೆ ಇಂದು ಬೆಳಿಗ್ಗೆ ಅಸ್ವಸ್ಥತೆ ಕಂಡುಬಂದ ಹಿನ್ನೆಲೆಯಲ್ಲಿ ಪುತ್ತೂರಿನ ಡಾ.ಎಂ.ಕೆ.ಪ್ರಸಾದ್ ತಪಾಸಣೆ ನಡೆಸಿದ್ದು ಬಳಿಕ ಸೂಕ್ತ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿರುವರೆಂದು ಮೂಲಗಳು ತಿಳಿಸಿವೆ.
ಮೂತ್ರನಾಳದ ಸಮಸ್ಯೆಯಿಂದ ಆರೋಗ್ಯದಲ್ಲಿ ತೊಂದರೆಯುಂಟಾಗಿದ್ದು, ಪ್ರಸ್ತುತ ಭಯಪಡುವ ಅಗತ್ಯವಿಲ್ಲ. ವಿಶ್ರಾಂತಿಯಲ್ಲಿ ತಂತ್ರಿಗಳಿರುವರೆಂದು ತಿಳಿದುಬಂದಿದೆ.