ಕಾಸರಗೋಡು: ಅಂತರ್ಜಲ ಸಂರಕ್ಷಣೆಗಾಗಿ ಸಮಗ್ರ ಜಲಾನಯನ ಆಧಾರಿತ ಯೋಜನೆಯೊಂದಿಗೆ ನವ ಕೇರಳ ಮಿಷನ್ ಯೋಜನೆ ಜಾರಿಗೊಳಿಸುತ್ತಿದೆ. ಅಂತರ್ಜಲ ಮಟ್ಟ ಜಿಲ್ಲೆಯಲ್ಲಿ ಗಣನೀಯವಾಗಿ ಕುಸಿದಿದ್ದು, ಭಾವಿಯಲ್ಲಿ ಇದು ನೀರಿನ ಭಾರಿ ಬಿಕ್ಕಟ್ಟು ಸೃಷ್ಟಿಸಲಿರುವ ಹಿನ್ನೆಲೆಯಲ್ಲಿ ಅಂತರ್ಜಲ ಸಂರಕ್ಷಣಾ ಚಟುವಟಿಕೆಗಳನ್ನು ಬಲಪಡಿಸಲು ಹಾಗೂ ಜಲಮೂಲಗಳನ್ನು ಸಂರಕ್ಷಿಸಲು 'ನೀರಿನ ಒರತೆ'ಯೋಜನೆಯನ್ನು ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಯೋಜನೆಯನ್ವಯ ಜಲಾನಯನ ಅಭಿವೃದ್ಧಿಯ ಜತೆಗೆ ಮಣ್ಣು ಮತ್ತು ನೀರಿನ ಸಂರಕ್ಷಣಾ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುವುದು. ಈ ಮೂಲಕ ಪರಿಸರ ಸಂರಕ್ಷಣೆ, ಜಲಾನಯನ ಪ್ರದೇಶಗಳು ಮತ್ತು ಅವುಗಳ ಸಮಗ್ರ ಅಭಿವೃದ್ಧಿಯ ಗುರಿಯನ್ನು ಹೊಂದಿದೆ. ಚೆಕ್ ಡ್ಯಾಂಗಳು, ಬಾವಿಗಳ ಜಲಮರುಪೂರಣ, ಫಲಭರಿತ ಕೃಷಿ ಭೂಮಿ, ಇಂಗು ಗುಂಡಿ, ತ್ಯಾಜ್ಯ ನಿರ್ವಹಣೆ, ನೀರಿನ ಮೂಲಗಳನ್ನು ಪುನರುಜ್ಜೀವನಗೊಳಿಸುವುದು ಇತ್ಯಾದಿ ಚಟುವಟಿಕೆಗಳನ್ನು ಯೋಜನೆಯ ಅಂಗಗವಾಗಿ ಕಾರ್ಯಗತಗೊಳಿಸಲಾಗುತ್ತದೆ.
ಪ್ರತಿ ನದಿಗಳ ಸಂಪೂರ್ಣ ಜಲಾನಯನ ಪ್ರದೇಶವನ್ನು ಗುರುತಿಸಿ ನೀರು, ಮಣ್ಣು ಸಂರಕ್ಷಣಾ ಯೋಜನೆಗಳನ್ನು ಸಿದ್ಧಪಡಿಸಲಾಗುವುದು. ಸಾಂಪ್ರದಾಯಿಕ ನಿರ್ಮಾಣದ ಹೊರತಾಗಿ, ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ಜಲಮೂಲಗಳನ್ನು ಪುನರುಜ್ಜೀವನಗೊಳಿಸಲು ಅಗತ್ಯವಾದ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಮಳೆಯಾಶ್ರಿತ ಪ್ರದೇಶಗಳಲ್ಲಿ ಮಣ್ಣು ಮತ್ತು ಜಲ ಸಂರಕ್ಷಣೆ, ಕೃಷಿ ಮತ್ತು ಭೂಮಿ ಹಸಿರೀಕರಣಕ್ಕೆ ಬೇಕಾದ ಯೋಜನೆಗಳನ್ನು ಸಿದ್ಧಪಡಿಸುವುದು ಮುಕ್ಯ ಉದ್ದೇಶವಾಗಿದೆ.
'ನೀರಿನ ಒರತೆ' ಯೋಜನೆ: ಜಲ ಸಂರಕ್ಷಣೆಗೆ ಹೊಸ ಮಾದರಿ
0
ಅಕ್ಟೋಬರ್ 04, 2022
Tags