HEALTH TIPS

ಭಯೋತ್ಪಾದನೆ ನಿಗ್ರಹಿಸಲು ಜಗತ್ತು ಕ್ಷಿಪ್ರ ಸ್ಪಂದಿಸಲಿ: ನರೇಂದ್ರ ಮೋದಿ

 

             ನವದೆಹಲಿ: ಭ್ರಷ್ಟಾಚಾರ, ಭಯೋತ್ಪಾದನೆ, ಮಾದಕ ವಸ್ತು ಕಳ್ಳಸಾಗಣೆ, ಕಳ್ಳ ಬೇಟೆ ಹಾಗೂ ಸಂಘಟಿತ ಅಪರಾಧಗಳಿಗೆ ಯಾವುದೇ ಸುರಕ್ಷಿತ ನೆಲೆ ಇರಬಾರದು. ಈ ಅಪಾಯಗಳ ನಿಗ್ರಹಕ್ಕೆ ಜಾಗತಿಕ ಸ್ಪಂದನೆ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಕರೆ ನೀಡಿದರು.

      ಪ್ರಗತಿ ಮೈದಾನದಲ್ಲಿ ನಡೆದ ಇಂಟರ್‌ಪೋಲ್‌ನ 90ನೇ ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಅಪರಾಧಗಳು ವಿಶ್ವಸಮುದಾಯ ಎದುರಿಸುತ್ತಿರುವ ಜಾಗತಿಕ ಬೆದರಿಕೆಗಳಾಗಿವೆ. ಇದರ ನಿರ್ಮೂಲನೆಗೆ ಜಾಗತಿಕ ಸಮುದಾಯ ಕ್ಷಿಪ್ರಗತಿಯಲ್ಲಿ ಕ್ರಮಕೈಗೊಂಡರೆ, ತನಿಖಾ ಸಂಸ್ಥೆಗಳು ಉತ್ತಮ ಸಹಕಾರ ನೀಡಿದರೆ, ಅಪರಾಧ ಹಿನ್ನೆಲೆಯ ಶಕ್ತಿಗಳು ನಿಷ್ಕ್ರಿಯವಾಗಲಿವೆ ಎಂದರು.

                    'ಈ ಅಪಾಯಗಳ ವೇಗವು ಮೊದಲಿಗಿಂತ ಈಗ ವೇಗವಾಗಿ ಬದಲಾಗಿದೆ. ಬೆದರಿಕೆಗಳು ಜಾಗತಿಕವಾಗಿದ್ದಾಗ, ಪ್ರತಿಕ್ರಿಯೆ ಕೇವಲ ಸ್ಥಳೀಯವಾಗಿರಲು ಸಾಧ್ಯವಿಲ್ಲ. ಭಯೋತ್ಪಾದನೆ ಸೈಬರ್‌ ದಾಳಿಗೂ ವಿಸ್ತರಿಸಿದೆ. ಈ ಬೆದರಿಕೆಗಳನ್ನು ಮಣಿಸಲು ಜಗತ್ತು ಒಟ್ಟುಗೂಡುವ ಸಮಯವಿದು. ಜಗತ್ತಿನ ಸುರಕ್ಷತೆ ಮತ್ತು ಭದ್ರತೆ ಜಾಗತಿಕ ಸಮುದಾಯದ ಸಮಾನ ಜವಾಬ್ದಾರಿ' ಎಂದು ಮೋದಿ ಪ್ರತಿಪಾದಿಸಿದರು.

                 'ಭಾರತವು ಹಲವು ದಶಕಗಳಿಂದ ವಿದೇಶಿ ಪ್ರಾಯೋಜಿತ ಭಯೋತ್ಪಾದನೆಯನ್ನು ಎದುರಿಸುತ್ತಿದೆ. ಜಗತ್ತು ಇದರತ್ತ ಎಚ್ಚೆತ್ತುಕೊಳ್ಳುವ ಮೊದಲೇ, ಸುರಕ್ಷತೆ ಮತ್ತು ಭದ್ರತೆಯ ಮಹತ್ವ ನಮಗೆ ತಿಳಿದಿತ್ತು. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ನಮ್ಮ ಸಾವಿರಾರು ಜನರು ಪ್ರಾಣ ತ್ಯಾಗ ಮಾಡಿದ್ದಾರೆ' ಎಂದು ಅವರು ಹೇಳಿದರು.

                 90ನೇ ಸಾಮಾನ್ಯ ಸಭೆಯ ನೆನಪಿನಾರ್ಥ ವಿಶೇಷ ಅಂಚೆ ಚೀಟಿ ಮತ್ತು ₹100 ನಾಣ್ಯವನ್ನು ಮೋದಿ ಬಿಡುಗಡೆ ಮಾಡಿದರು. ಗೃಹ ಸಚಿವ ಅಮಿತ್‌ ಶಾ, ಇಂಟರ್‌ಪೋಲ್‌ ಅಧ್ಯಕ್ಷ ಅಹ್ಮದ್‌ ನಾಸಿರ್‌ ಅಲ್‌ ರೈಸಿ, ಪ್ರಧಾನಕಾರ್ಯದರ್ಶಿ ಜರ್ಗೆನ್‌ ಸ್ಟಾಕ್‌ ಇದ್ದರು. ಪಾಕಿಸ್ತಾನದ ಫೆಡರಲ್‌ ಇನ್ವೆಸ್ಟಿಗೇಷನ್‌ ಏಜೆನ್ಸಿ (ಎಫ್‌ಐಎ) ಮಹಾನಿರ್ದೇಶಕ ಮೊಹ್ಸಿನ್‌ ಭಟ್‌ ಸೇರಿ 195 ದೇಶಗಳ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗವಹಿಸಿದ್ದರು.


                   


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries