ಬದಿಯಡ್ಕ: ಕೆಪಿಎಸ್ ಟಿ ಎ ಕುಂಬಳೆ ಉಪಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕೇರಳ ಸÀರ್ಕಾರದ ವಿರುದ್ಧ ನಿನ್ನೆ ಪ್ರತಿಭಟನಾ ದಿನವಾಗಿ ಆಚರಿಸಲಾಯಿತು.
ಅಧ್ಯಾಪಕರ ವಿವಿಧ ಬೇಡಿಕೆಯನ್ನು ಅಂಗೀಕರಿಸಬೇಕೆಂದು,1:40 ಅಧ್ಯಾಪಕ ವಿದ್ಯಾರ್ಥಿ ಅನುಪಾತ ವನ್ನೂ ಅಂಗೀಕರಿಸಬೇಕೆಂದು, ಬಾಕಿ ಇರುವ 11 ಶೇಕಡಾ ಡಿ.ಎ ಯನ್ನು ಅದಷ್ಟು ಬೇಗ ವಿತರಿಸಬೇಕೆಂದು, ಖಾದರ್ ಸಮಿತಿ ರದ್ದುಗೊಳಿಸಬೇಕೆಂದು, ವಿದ್ಯಾರ್ಥಿಗಳ ಮಧ್ಯಾಹ್ನದ ಊಟದ ಮೊತ್ತವನ್ನು ಹೆಚ್ಚಿಸಬೇಕು ಮೊದಲಾದ ಬೇಡಿಕೆಯನ್ನು ಇಟ್ಟುಕೊಂಡು ಧರಣಿ ಸಭೆ ಮತ್ತು ಮೆರವಣಿಗೆ ನಡೆಯಿತು.
ಕುಂಬಳೆ ಉಪ ಜಿಲ್ಲಾಧ್ಯಕ್ಷೆ ಜಲಜಾಕ್ಷಿ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಪ್ರಶಾಂತ್ ಕಾನತ್ತೂರು ಉದ್ಘಾಟಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ಗೋಪಾಲಕೃಷ್ಣ ಮಾಸ್ಟರ್, ರಾಧಾಕೃಷ್ಣ ಮಾಸ್ಟರ್, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸೋಮನಾಥ ಮಾಸ್ಟರ್, ಓಮನ ಟೀಚರ್, ಬಾಲಕೃಷ್ಣ ಮಾಸ್ತರ್, ನೇತೃತ್ವ ನೀಡಿದರು, ಉಪ ಜಿಲ್ಲಾ ಕಾರ್ಯದರ್ಶಿ ನಿಂಜನ ರೈ ಪೆರಡಾಲ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಉಪಾಧ್ಯಕ್ಷ ಶರತ್ ಚಂದ್ರ ಶೆಟ್ಟಿ ವಂದಿಸಿದರು.