ಕಣ್ಣೂರು: ಮಾಜಿ ಗೃಹ ಸಚಿವ ಹಾಗೂ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಅಂತ್ಯಕ್ರಿಯೆಯನ್ನು ಪಯ್ಯಂಬಲಂನಲ್ಲಿ ಸಕಲ ಗೌರವಗಳೊಂದಿಗೆ ನೆರವೇರಿಸಲಾಯಿತು.
ಮಾಜಿ ಮುಖ್ಯಮಂತ್ರಿ ಇ.ಕೆ.ನಾಯನಾರ್ ಮತ್ತು ಸಿಪಿಎಂ ನಾಯಕ ಚಡಯನ್ ಗೋವಿಂದನ್ ಸ್ಮಾರಕ ಮಂದಿರದ ಮಧ್ಯದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಸೇರಿದಂತೆ ಹಿರಿಯ ನಾಯಕರು ಪಾರ್ಥಿವ ಶರೀರವನ್ನು ಹೆಗಲ ಮೇಲೆ ಹೊತ್ತುಕೊಂಡರು. ಮಕ್ಕಳಾದ ಬಿನೋಯ್ ಕೊಡಿಯೇರಿ ಮತ್ತು ಬಿನೀಶ್ ಕೊಡಿಯೇರಿ ಚಿತೆ ಬೆಳಗಿದರು.
ಕೊಡಿಯೇರಿ ಬಾಲಕೃಷ್ಣನ್ ಅವರ ಪಾರ್ಥಿವ ಶರೀರವನ್ನು ಹೊತ್ತ ಶವಯಾತ್ರೆಯು ಸಿಪಿಎಂ ಜಿಲ್ಲಾ ಸಮಿತಿ ಕಚೇರಿಯಾದ ಅಝಿಕೋಡನ್ ಮಂದಿರದಿಂದ ಪಯ್ಯಂಬಲಂಗೆ ಆಗಮಿಸಿತು. ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಪ.ಬಿ.ಸದಸ್ಯ ಪ್ರಕಾಶ್ ಕಾರಟ್, ಬಿಜೆಪಿ ನಾಯಕ ವತ್ಸನ್ ತಿಲ್ಲಂಗೇರಿ, ಸಿ.ಕೆ ಪದ್ಮನಾಭನ್, ವಿಪಕ್ಷ ನಾಯಕ ವಿ.ಡಿ.ಸತೀಶನ್ ಅವರು ಕೊಡಿಯೇರಿ ಬಾಲಕೃಷ್ಣನ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕೊಡಿಯೇರಿ ಬಾಲಕೃಷ್ಣನ್ ಅವರು ಶನಿವಾರ ರಾತ್ರಿ 8 ಗಂಟೆಗೆ ಚೆನ್ನೈನ ಅಪೆÇೀಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದು, ನಿನ್ನೆ ಮಧ್ಯಾಹ್ನ ಅವರ ಪಾರ್ಥಿವ ಶರೀರವನ್ನು ಏರ್ ಆಂಬುಲೆನ್ಸ್ ನಲ್ಲಿ ಕಣ್ಣೂರಿಗೆ ತರಲಾಗಿತ್ತು.
ಕೊಡಿಯೇರಿ ಬಾಲಕೃಷ್ಣನ್ ನೆನಪು ಮಾತ್ರ: ವಿಧಿವಿಧಾನಗಳೊಂದಿಗೆ ನೆರವೇರಿದ ಅಂತ್ಯಕ್ರಿಯೆ
0
ಅಕ್ಟೋಬರ್ 03, 2022