ಕಾಸರಗೋಡು: ಪರಿಶಿಷ್ಟ ಜಾತಿಯ ಮಹಿಳೆಯರಿಗೆ ಸಿಂಗಾರಿ ಮೇಳ ತರಬೇತಿ ಮತ್ತು ಸಂಗೀತ ಪರಿಕರಗಳನ್ನು ಒದಗಿಸುವ ಜಿಲ್ಲಾ ಪಂಚಾಯಿತಿಯ ಹೆಮ್ಮೆಯ ಯೋಜನೆಯನ್ವಯ ವಾದ್ಯೋಪಕರಣಗಳ ವಿತರಣೆ ನಡೆಯಿತು. ಜಲಸಂಪನ್ಮೂಲ ಸಚಿವ ರೋಶಿ ಆಗಸ್ಟಿನ್ ಚೆಂಡೆ ಬಡಿಯುವ ಮೂಲಕ ವಾದ್ಯೋಪಕರಣಗಳ ವಿತರಣೆಗೆ ಚಾಲನೆ ನೀಡಿದರು.
10.5 ಲಕ್ಷ ದೇಣಿಗೆ ಹೊಂದಿರುವ ಈ ಯೋಜನೆಯಲ್ಲಿ ಐದು ಗುಂಪಿನ ಮಹಿಳೆಯರಿಗೆ ಸಂಗೀತ ವಾದ್ಯಗಳನ್ನು ನೀಡಲಾಯಿತು, ಜತೆಗೆ ಸಿಂಗಾರಿಮೇಳ ತರಬೇತಿಯನ್ನೂ ನೀಡಲಾಯಿತು. ಮಹಿಳೆಯರಿಗೆ ಲಾಭದಾಯಕ ಉದ್ಯೋಗವನ್ನು ನೀಡುವ ಮೂಲಕ ಕಲೆ ಮತ್ತು ಸಂಸ್ಕøತಿ ಕ್ಷೇತ್ರಗಳಲ್ಲಿ ಸಬಲೀಕರಣಗೊಳಿಸುವುದು, ಪೆÇ್ರೀತ್ಸಾಹಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಎಳಂಬಚ್ಚಿ ಧನಶ್ರೀ ಮಹಿಳಾ ಸಹಾಯ ಸಂಘ, ಮಹಾಕಾಳಿ ಮಹಿಳಾ ವಾದ್ಯ ತಂಡ ಪಚಿಲಂಪಾರೆ, ಶ್ರೀಕ್ಷೇತ್ರಪಾಲಕ ಮಾಚಿಕ್ಕಾಡ್, ಮಹಿಳಾ ಸಂಗಮ ಮೂಲಕಂಡ ಕಾಲನಿ ಮತ್ತು ಆಂಜನೇಯ ಸಂಗಮ ಮೂಲಕಂಡ ಎಂಬ ಐದು ಗುಂಪುಗಳಿಗೆ ವದ್ಯೋಪಕರಣ ಖರೀದಿಗೆ 4.45 ಲಕ್ಷ ರೂ. ಹಾಗೂ ತರಬೇತಿಗಾಗಿ ಮೂರು ಲಕ್ಷ ರೂ. ವಿತರಿಸಲಾಗಿದೆ ಎಂದು ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ಎಸ್.ಮೀನಾ ರಾಣಿ ತಿಳಿಸಿದರು.
ಜಿ.ಪಂ ಅಭಿವೃದ್ಧಿ, ಕಲ್ಯಾಣ ಯೋಜನೆ: ವಿವಿಧ ತಂಡಗಳಿಗೆ ಸಿಂಗಾರಿ ಮೇಳ ಪರಿಕರ ವಿತರಣೆ
0
ಅಕ್ಟೋಬರ್ 28, 2022