ಬದಿಯಡ್ಕ: ಶಾಲೆಗಳು ಸಮಾಜದ ಕಣ್ಣುಗಳು. ಊರವರ ಸಹಕಾರದಿಂದ ಶಾಲೆಗಳು ಉನ್ನತ ಮಟ್ಟದ ಸಾಧನೆ ಮಾಡಬಹುದು. ಮಕ್ಕಳು ಬಾಲ್ಯದಲ್ಲಿ ದುಶ್ಚಟಗಳಿಗೆ ಬಲಿಯಾಗದೆ ವಿದ್ಯಾಭ್ಯಾಸ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಸಂಸದ ರಾಜಮೋಹನ್ ಉಣ್ಣಿತ್ತಾನ್ ಹೇಳಿದರು.
ಪೆರಡಾಲ ಸರ್ಕಾರಿ ಪ್ರೌಢ ಶಾಲೆಯ ನವೀಕೃತ ಪ್ರಮುಖ ಪ್ರವೇಶ ದ್ವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಶಾಲೆಯ ಅಭಿವೃದ್ಧಿಗೆ ತನ್ನ ಸಹಾಯ ನೀಡುವುದಾಗಿ ಅವರು ಭರವಸೆಯಿತ್ತರು. ಕೇರಳ ರಾಜ್ಯ ಸರ್ಕಾರದ ವೃತ್ತಿ ಪರಿಚಯ ಯೋಜನೆಯ ಅಂಗವಾಗಿ ಶಾಲೆಯ ಮಕ್ಕಳಿಗೆ ಹೊಲಿಗೆ ತರಬೇತಿಯ 'ಪಟ್ಟೆಯುಡುಪು' ಯೋಜನೆಯನ್ನು ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಂತಾ ಅವರು ಉದ್ಘಾಟಿಸಿದರು. ರಕ್ಷಕರ ಪ್ರಾಯೋಜಿತ ನೀರು ಶುದ್ಧೀಕರಣ ಯಂತ್ರದ ಉದ್ಘಾಟನೆಯನ್ನು ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯೆ ಶೈಲಜಾ ಭಟ್ ಉದ್ಘಾಟಿಸಿದರು. ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದರು. ಜಿಲ್ಲಾ ಪಂಚಾಯತಿ ಸದಸ್ಯೆ ಶೈಲಜಾ ಭಟ್, ಗ್ರಾಮ ಪಂಚಾಯತಿ ಸದಸ್ಯ ಬಾಲಕೃಷ್ಣ ಶೆಟ್ಟಿ, ವಿವಿಧ ರಾಜಕೀಯ ಪಕ್ಷಗಳ ನೇತಾರರಾದ ನಾರಾಯಣನ್, ನಾರಾಯಣ ಭಟ್ ಶುಭಾಶಂಶನೆಗೈದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮೊಹಮ್ಮದ್ ಕರೋಡಿ ಶಾಲೆಯ ಅಗತ್ಯತೆಗಳ ಮನವಿ ನೀಡಿದರು. ಶಾಲಾ ಮುಖ್ಯೋಪಾಧ್ಯಾಯ ರಾಜಗೋಪಾಲ ಸ್ವಾಗತಿಸಿ, ಶಿಕ್ಷಕ ರಿಶಾದ್ ವಂದಿಸಿದರು. ಶಿಕ್ಷಕ ಶ್ರೀಧರನ್ ಕಾರ್ಯಕ್ರಮ ನಿರೂಪಿಸಿದರು.
ಎಲ್ಲರ ಸಹಕಾರದಿಂದ ಶಾಲೆಯ ಉನ್ನತಿ: ಸಂಸದ ರಾಜ್ ಮೋಹನ್ ಉಣ್ಣಿತ್ತಾನ್
0
ಅಕ್ಟೋಬರ್ 04, 2022
Tags