ಎರ್ನಾಕುಳಂ: ಕೆ.ಎಸ್.ಆರ್.ಟಿ.ಸಿ.ಯನ್ನು ಜಾಹೀರಾತುಗಳಿಂದ ಮುಚ್ಚಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಬಸ್‍ಗಳ ಹಿಂಭಾಗ ಮತ್ತು ಬದಿಗಳಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸಲು ಕಾನೂನು ಅನುಮತಿ ಇದೆ ಎಂದು ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿದರೂ ವಿಭಾಗೀಯ ಪೀಠ ಒಪ್ಪದೆ ಅದು ಸಾಧ್ಯವಿಲ್ಲ ಎಮದು ತಿಳಿಸಿದೆ.
ಕೆ.ಎಸ್.ಆರ್.ಟಿ.ಸಿ. ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ. ಜಾಹೀರಾತು ನಿಯಂತ್ರಿಸುವುದರಿಂದ ನಿಗಮ ಮತ್ತೆ ಸಂಕಷ್ಟಕ್ಕೆ ಸಿಲುಕಲಿದೆ. ಈ ಬಗ್ಗೆ ಸರ್ಕಾರ ಕೆಎಸ್‍ಆರ್‍ಟಿಸಿಯನ್ನು ಕೇಳಿದೆ.
ವಡಕಂಚೇರಿ ಬಸ್ ಅಪಘಾತಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ತೆಗೆದುಕೊಂಡ ಪ್ರಕರಣದಲ್ಲಿ ನ್ಯಾಯಮೂರ್ತಿಗಳಾದ ಅನಿಲ್ ಕೆ.ನರೇಂದ್ರನ್ ಮತ್ತು ಪಿ.ಜಿ.ಅಜಿತ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ರೀತಿಯ ಉಲ್ಲೇಖ ಮಾಡಿದೆ.
ಕೆಎಸ್‍ಎಟಿಸಿ ಬಸ್‍ಗಳಲ್ಲಿ ಜಾಹೀರಾತು ಹಾಕುವಂತಿಲ್ಲ ಎಂದು ನಿನ್ನೆ ಹೈಕೋರ್ಟ್ ಆದೇಶ ನೀಡಿತ್ತು. ಸುರಕ್ಷತಾ ಮಾನದಂಡಗಳನ್ನು ಪೂರೈಸುವಲ್ಲಿ ಖಾಸಗಿ ಮತ್ತು ಸಾರ್ವಜನಿಕ ವಾಹನಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಈಗಿರುವ ಜಾಹೀರಾತುಗಳನ್ನು ಹಿಂಪಡೆಯಬೇಕು. ಕೆಎಸ್‍ಆರ್‍ಟಿಸಿ ಮತ್ತು ಕೆಯುಆರ್‍ಟಿಸಿ ಬಸ್‍ಗಳಲ್ಲಿನ ಜಾಹೀರಾತುಗಳು ಸುರಕ್ಷತಾ ಮಾನದಂಡಗಳಿಗೆ ವಿರುದ್ಧವಾಗಿವೆ ಎಂದು ನ್ಯಾಯಾಲಯ ಗಮನಿಸಿದೆ.
ಈಗಿನ ಸಂಚಾರ ನಿಯಮಗಳ ಪ್ರಕಾರ ಸರ್ಕಾರದ ಅನುಮತಿ ಪಡೆದು ವಾಹನಗಳ ಮೇಲೆ ಜಾಹೀರಾತು ಹಾಕಬಹುದು. ಸಾರ್ವಜನಿಕ ವಲಯದ ಸಂಸ್ಥೆಯಾದ ಕೆಎಸ್‍ಆರ್‍ಟಿಸಿಗೆ ಸರ್ಕಾರ ಅನುಮತಿ ನೀಡಿದೆ.ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಜಾಹೀರಾತು ಪ್ರದರ್ಶಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಜಾಹೀರಾತುಗಳಿಗೆ ಅವಕಾಶ ನೀಡುವ ಮೂಲಕ ವರ್ಷಕ್ಕೆ 1 ಕೋಟಿ 80 ಲಕ್ಷ ರೂ.ಲಾಭವಾಗುತ್ತಿದೆ ಎಂದು ಸಾರಿಗೆ ಸಚಿವರು ತಿಳಿಸಿದ್ದರು.
ಕೆ.ಎಸ್.ಆರ್.ಟಿ.ಸಿಗೂ ಜಾಹೀರಾತು ಪ್ರದರ್ಶಿಸಲು ಅವಕಾಶವಿಲ್ಲ: ಹೈಕೋರ್ಟ್: ಅನುಮತಿ ಇದೆ ಎಂದ ಸರ್ಕಾರ
0
ಅಕ್ಟೋಬರ್ 20, 2022
Tags