ಆಲಪ್ಪುಳ: ರಾಜ್ಯದಲ್ಲಿ ಮತ್ತೆ ವರದಕ್ಷಿಣೆ ಕಿರುಕುಳ ಕೇಳಿಬಂದಿದೆ. ಚೇರ್ತಲದ ಮಹಿಳೆಯೊಬ್ಬಳು ತನ್ನ ಗಂಡನ ಮನೆಯಲ್ಲಿ ಕ್ರೂರ ಚಿತ್ರಹಿಂಸೆಯನ್ನು ಎದುರಿಸಿರುವುದಾಗಿ ದೂರಲಾಗಿದೆ.
ಪತಿ, ಪತಿಯ ತÀಂದೆ, ತಾಯಿ ಸೇರಿ ಚಿತ್ರಹಿಂಸೆ ನೀಡಿದ್ದಾರೆ ಎಂದು ದೂರಲಾಗಿದೆ.
ಪತಿಯ ತಾಯಿ ರಾತ್ರಿ ತನ್ನನ್ನು ಮನೆಯಿಂದ ಹೊರದಬ್ಬಿ ಬಾಗಿಲು ಮುಚ್ಚಿದರು. ಕೈ ಕಚ್ಚಿ ಕೊರಳಿಗೆ ಶಾಲು ಬಿಗಿದು ಕೊಲೆಗೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಹಲವು ಬಾರಿ ದೂರು ನೀಡಿದರೂ ಪೋಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.
ಕಳೆದ ಐದು ತಿಂಗಳಿಂದ ವಿಚ್ಛೇದನ ನೀಡುವಂತೆ ಕಿರುಕುಳ ನೀಡುತ್ತಿದ್ದರು. ಪತಿ ಮಕ್ಕಳು ತಮ್ಮದಲ್ಲ ಎಂದು ಪ್ರಚಾರ ಮಾಡಲು ಯತ್ನಿಸಿದರು. ಗರ್ಭಿಣಿಯಾಗಿದ್ದಾಗಲೂ ಥಳಿಸಲಾಗಿತ್ತು. ತನ್ನ ಮಕ್ಕಳಿಗಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದೇನೆ ಎಂದು ಮಹಿಳೆ ಹೇಳಿರುವರು.
ಯುವತಿಗೆ 2013ರಲ್ಲಿ ಆಟೋ ಚಾಲಕ ರಜನಿಕಾಂತ್ ಎಂಬಾತನೊಂದಿಗೆ ವಿವಾಹವಾಗಿತ್ತು.ಮದುವೆಯಾದ ಮೂರು ತಿಂಗಳಲ್ಲೇ ಗಂಡನ ಮನೆಯವರು ವರದಕ್ಷಿಣೆಗಾಗಿ ಕಿರುಕುಳ ನೀಡಲಾರಂಭಿಸಿದ್ದರು ಎಂದು ಯುವತಿಯ ತಂದೆ ತಿಳಿಸಿದ್ದಾರೆ. ಮಗಳಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ. ಬಳಿಕ ಮಗಳನ್ನು ಮನೆಗೆ ಕರೆತರಲಾಗಿತ್ತು. ಆದರೆ ಅವರು ಸಮಸ್ಯೆಗಳನ್ನು ಪರಿಹರಿಸಿ ತಮ್ಮ ಮಗಳನ್ನು ವಾಪಸ್ ಕರೆದೊಯ್ದರು. ಮಕ್ಕಳು ಹುಟ್ಟಿದ ಮೇಲೂ ದೌರ್ಜನ್ಯ ಮುಂದುವರಿದಿತ್ತು. ಪೋಲೀಸರಿಗೆ ದೂರು ನೀಡಲು ಹೋದಾಗ ಪೋಲೀಸರು ಸಕಾರಾತ್ಮಕ ನಿಲುವು ತಳೆದಿರಲಿಲ್ಲ ಎಂದು ಮಹಿಳೆಯ ತಂದೆ ಹೇಳಿದ್ದಾರೆ.
ಸೊಸೆಯ ಕೈ ಕಚ್ಚಿ ಮನೆಯಿಂದ ಹೊರದಬ್ಬಿದ ಅತ್ತೆ: ಕುತ್ತಿಗೆಗೆ ಶಾಲು ಬಿಗಿದು ಕೊಲ್ಲುವ ಬೆದರಿಕೆ: ರಾಜ್ಯದಲ್ಲಿ ಮತ್ತೆ ವರದಕ್ಷಿಣೆ ಕಿರುಕುಳ
0
ಅಕ್ಟೋಬರ್ 13, 2022