ಬದಿಯಡ್ಕ: ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಂಗಳವಾರ ಮಹಾನವಮಿಯಂದು ರಾತ್ರಿ ಮಹಾಪೂಜೆಯ ಸಂದರ್ಭದಲ್ಲಿ ದೀಪೋತ್ಸವ ನಡೆಯಿತು.
ಹತ್ತು ಸಾವಿರ ಹಣತೆಗಳನ್ನು ಏಕಕಾಲಕ್ಕೆ ಬೆಳಗಲಾಯಿತು. ದೇವಸ್ಥಾನದ ಮುಂಭಾಗದಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವಿಯ ರೂಪದಲ್ಲಿ ಹಚ್ಚಿದ ಹಣತೆಯ ದೀಪಗಳು ಆಕರ್ಷಣೀಯವಾಗಿತ್ತು. ಶ್ರೀ ಕ್ಷೇತ್ರದ ಹಿರಿಯರಾದ ಉಪ್ಪಂಗಳ ವಾಸುದೇವ ಭಟ್ ಸೂರ್ಯಾಸ್ತದ ವೇಳೆ ಶ್ರೀಸನ್ನಿಧಿಯಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ ದೀಪಜ್ವಲನೆಗೈದು ದೀಪೋತ್ಸವಕ್ಕೆ ಚಾಲನೆಯನ್ನು ನೀಡಿದರು. ಕ್ಷೇತ್ರದ ಆಡಳಿತ ಮೊಕ್ತೇಸರ ವೃಂದ, ಆಡಳಿತ ಸಮಿತಿ, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಊರ ಪರವೂರ ಭಕ್ತಾದಿಗಳು ದೀಪಜ್ವಲನೆಯಲ್ಲಿ ಪಾಲ್ಗೊಂಡಿದ್ದರು. ಭ|ಕ್ತಾದಿಗಳಿಂದ ಭಜನೆ ನಡೆಯಿತು.