HEALTH TIPS

ಬಜಕ್ಕೂಡ್ಲಲ್ಲಿ ಗೋಪಾಷ್ಟಮೀ ಮಹೋತ್ಸವ


           ಪೆರ್ಲ: ಬಜಕ್ಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ 12ನೇ ವರ್ಷದ ಗೋಪಾಷ್ಟಮೀ ಮಹೋತ್ಸವ ನ.1 ರಂದು ಬೆಳಿಗ್ಗೆ 7 ರಿಂದ ರಾತ್ರಿ 7.30ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
          ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 7 ಕ್ಕೆ ಗುರುವಂದನೆ, ಪ್ರಾರ್ಥನೆ, ಸ್ವಸ್ತಿಪುಣ್ಯಾಹ ನಡೆಯಲಿದೆ. 8 ರಿಂದ ಸೇವಾ ಸಂಕಲ್ಪಗಳು, ಗೋಪೂಜಾ ಸೇವೆಗಳ ಪ್ರಾರಂಭ,8.30 ರಿಂದ ಕಾರ್ತಿಕ ಮಾಸದ ಪ್ರಯುಕ್ತ ಶತರುದ್ರ ಪಾರಾಯಣ ಆರಂಭ, 9 ರಿಂದ ಶ್ರೀ ಗೋಪಾಲಕೃಷ್ಣ ಕಲ್ಪೋಕ್ತ ಪೂಜಾರಂಭ, ಗಣಪತಿಹವನ, ನವಗ್ರಹ ಶಾಂತಿ, ಕಾಮಧೇನು ಹವನ, ಗೋಪಾಲಕೃಷ್ಣ ಹವನ ಪ್ರಾರಂಭ, 11 ರಿಂದ ಮಾತೆಯರಿಂದ ಕುಂಕುಮಾರ್ಚನೆ, ಭಜನೆ, 12 ಕ್ಕೆ ಹವನಗಳ ಪೂರ್ಣಾಹುತಿ, ಸಾಮೂಹಿಕ ಗೋಪೂಜೆ, 12.30 ಕ್ಕೆ ಮಂಗಳಾರತಿ, ಪ್ರಸಾದ ವಿತರಣೆ, ಮಧ್ಯಾಹ್ನ 1 ಕ್ಕೆ ಪ್ರಸಾದ ಭೋಜನ, ಅಪರಾಹ್ನ 3 ರಿಂದ ಗೋಪೂಜಾಸೇವೆ ಪ್ರಾರಂಭ, ಭಜನೆ, 4.30 ರಿಂದ ಗೋವರ್ಧನ ಪೂಜಾರಂಭ, 5 ರಿಂದ ವಿಷ್ಣು ಸಹಸ್ರನಾಮಾರ್ಚನೆ, 6 ರಿಂದ ಸಾಮೂಹಿಕ ಗೋಪೂಜಾ ಮಂಗಲ, ಗೋಪೂಜಾಸೇವೆಯ ಮುಕ್ತಾಯ, ತುಳಸೀಪೂಜೆ, ದೀಪೋತ್ಸವ, ಸಂಜೆ 7 ರಿಂದ ಗೋವರ್ಧನ ದೀಪೋತ್ಸವ, ಭಜನಾಮಂಗಲ, 7.30 ರಿಂದ ಮಹಾಮಂಗಳಾರತಿ, ಶ್ರೀದೇವರಿಗೆ ರಾಜೋಪಚಾರ ಸೇವೆ, ಪ್ರಸಾದ ವಿತರಣೆ, ಪ್ರಸಾದ ಭೋಜನದೊಂದಿಗೆ ಸಂಪನ್ನಗೊಳ್ಳಲಿದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries