ಕಾಸರಗೋಡು: ರಾಜ್ಯ ಸರ್ಕಾರದ ಮಾದಕ ವಸ್ತು ವಿರೋಧಿ ಅಭಿಯಾನದ ಅಂಗವಾಗಿ ಮಾದಕ ದ್ರವ್ಯ ವಿಮುಕ್ತ ಕೇರಳ ಜಿಲ್ಲಾ ಮಟ್ಟದ ಉದ್ಘಾಟನೆ ಅ. 6ರಂದು ಬೆಳಗ್ಗೆ 10ಕ್ಕೆ ನಾಯಮರ್‍ಮೂಲೆ ಟಿ.ಐ.ಎಚ್. ಎಸ್‍ಎಸ್‍ನಲ್ಲಿ ನಡೆಯಲಿದೆ. ಮುಖ್ಯಮಂತ್ರಿಗಳ ಮಾದಕ ವಸ್ತು ವಿರೋಧಿ ಸಂದೇಶವನ್ನು ಆನ್‍ಲೈನ್‍ನಲ್ಲಿ ಪ್ರದರ್ಶಿಸಲಾಗುವುದು. ಶಾಸಕ ಎನ್.ಎ ನೆಲ್ಲಿಕುನ ಜಿಲ್ಲಾ ಮಟ್ಟದ ಸಮಾರಂಭ ಉದ್ಘಾಟಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷರುಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಉಪ ಅಬಕಾರಿ ಆಯುಕ್ತರು ಡಿ. ಬಾಲಚಂದ್ರನ್ ಪ್ರಾಸ್ತಾವಿಕವಾಗಿ ಮಾತನಾಡುವರು. ನಾರ್ಕೋಟಿಕ್ ಸೆಲ್ ಡಿವೈಎಸ್ಪಿ ಎಂ.ಎ.ಮ್ಯಾಥ್ಯೂ ಮಾದಕ ವಸ್ತು ವಿರೋಧಿ ಪ್ರತಿಜ್ಞೆ ಬೋಧಿಸುವರು. ಜನಪ್ರತಿನಿಧಿಗಳು, ಅಧಿಕಾರಿಗಳು ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆ ಸಿದ್ಧಪಡಿಸಿರುವ ಕಿರು ವೀಡಿಯೋ ಪ್ರದರ್ಶಿಸಲಾಗುವುದು. ಜಿಲ್ಲೆಯ ಶಾಲೆಗಳಲ್ಲೂ ಮಾದಕ ದ್ರವ್ಯ ವಿಮುಕ್ತ ಕೇರಳ ಕಾರ್ಯಕ್ರಮ ಜರುಗಲಿರುವುದು.
ಇಂದು ಮಾದಕ ವಸ್ತು ವಿರೋಧಿ ಅಭಿಯಾನ ಜಿಲ್ಲಾ ಮಟ್ಟದ ಉದ್ಘಾಟನೆ
0
ಅಕ್ಟೋಬರ್ 05, 2022