ಬದಿಯಡ್ಕ: ಎಡನೀರು ಮೋಪಾಲ ಶ್ರೀಮಹಾವಿಷ್ಣು ಕ್ಷೇತ್ರ ಜೀರ್ಣೋದ್ದಾರ ಸಮಿತಿಯ ಮಹಾಸಭೆ ಅ.23 ರಂದು ಭಾನುವಾರ ಬೆಳಿಗ್ಗೆ 9.30 ಕ್ಕೆ ಎಡನೀರು ಶ್ರೀಮಠದ ಪರಿಸರದಲ್ಲಿ ನಡೆಯಲಿದೆ. ಸಭೆಯಲ್ಲಿ ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ದಿವ್ಯ ಉಪಸ್ಥಿತರಿದ್ದು, ಮಾರ್ಗದರ್ಶನ ನೀಡುವರು. ಜೀರ್ಣೋದ್ದಾರ ಸಂಬಂಧಿ ಈವರೆಗಿನ ಚಟುವಟಿಕೆಗಳು ಮತ್ತು ಮುಂದಿನ ಕಾರ್ಯಸೂಚಿಯ ಬಗ್ಗೆ ಚರ್ಚೆ ನಡೆಯಲಿದೆ ಎಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೋಪಾಲ ಸನ್ನಿಧಿ: ಮಹಾಸಭೆ
0
ಅಕ್ಟೋಬರ್ 19, 2022