ಕುಂಬಳೆ: ವಿಶ್ವ ದೃಷ್ಟಿ ದಿನದ ಅಂಗವಾಗಿ ಕುಂಬಳೆ ಸಮುದಾಯ ಆರೋಗ್ಯ ಕೇಂದ್ರ(ಸಿಎಚ್‍ಸಿ)ದಲ್ಲಿ ನಡೆದ ‘ಲವ್ ಯುವರ್ ಐಸ್’ ಅಭಿಯಾನ ಕಾರ್ಯಕ್ರಮ ಗಮನಾರ್ಹವಾಗಿತ್ತು. ನೇತ್ರ ತಪಾಸಣೆ, ವಿಚಾರ ಸಂಕಿರಣ, ರಸಪ್ರಶ್ನೆ ಸ್ಪರ್ಧೆ ನಡೆಸಲಾಯಿತು. ಬ್ರೈಲ್ ಲಿಪಿ ಶಿಕ್ಷಕ ಟಿ.ಹಂಸ ಉದ್ಘಾಟಿಸಿದರು. ಹದಿನೇಳನೇ ವಯಸ್ಸಿನಲ್ಲಿ ಟಿ.ಹಂಸ ಅವರು ತಮ್ಮ ದೃಷ್ಟಿ ಕಳೆದುಕೊಂಡ ಅನುಭವಗಳನ್ನು ತಿಳಿಸಿದರು. ವಿಚಾರ ಸಂಕಿರಣದಲ್ಲಿ ದೃಷ್ಟಿಯ ಮಹತ್ವ ಮತ್ತು ನೇತ್ರ ತಪಾಸಣೆಯ ಅಗತ್ಯದ ಕುರಿತು ಚರ್ಚಿಸಲಾಯಿತು. ಈ ವರ್ಷದ ವಿಶ್ವ ದೃಷ್ಟಿ ದಿನದ ಥೀಮ್ 'ನಿಮ್ಮ ಕಣ್ಣುಗಳನ್ನು ಪ್ರೀತಿಸಿ' ಎಂಬುದರ ಬಗ್ಗೆ ಚರ್ಚಿಸಲಾಯಿತು.
ಡಾ.ಸುಬ್ಬ ಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್, ಆರೋಗ್ಯ ನಿರೀಕ್ಷಕ ನಿಶಾಮೋಳ್, ಪಿಎಚ್‍ಎನ್ ಕುಂಞಮಿ, ಜೆಪಿಎಚ್‍ಎನ್ ಶಾರದ, ಕಿರಿಯ ಆರೋಗ್ಯ ನಿರೀಕ್ಷಕ ಕೆ.ಕೆ.ಆದರ್ಶ್, ನೂರ್ಜಹಾನ್, ಎಂ.ವಿ.ಆದೇಶ, ಪಿ.ಆದಿತ್ಯನ್, ಕ್ಲಾರ್ಕ್ ರವಿಕುಮಾರ್ ಮಾತನಾಡಿದರು.
ಈ ಸಂದರ್ಭ ಆಯೋಜಿಸಲಾದ ಕ್ವಿಜ್ ಸ್ಪರ್ಧೆಯಲ್ಲಿ ಆಪೆÇ್ಟೀಮೆಟ್ರಿಸ್ಟ್ ಓ.ವಿ.ಶ್ರುತಿ ಕ್ವಿಜ್ ಮಾಸ್ಟರ್ ಆಗಿದ್ದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ಆಶಾ ಕಾರ್ಯಕರ್ತೆಯರಾದ ಟಿ.ವಿ.ಸರಳಾ ಮತ್ತು ವೀಣಾ ಜನಾರ್ದನನ್ ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆದರು.
ಕಣ್ಣುಗಳನ್ನು ಪ್ರೀತಿಸುವ ಸಂದೇಶ ಸಾರಿದ ವಿಶ್ವ ದೃಷ್ಟಿ ದಿನಾಚರಣೆ
0
ಅಕ್ಟೋಬರ್ 15, 2022
Tags