ತಿರುವನಂತಪುರ: ಈ ಬಾರಿಯ ವಯಲಾರ್ ರಾಮವರ್ಮ ಸ್ಮಾರಕ ಸಾಹಿತ್ಯ ಪ್ರಶಸ್ತಿಯನ್ನು ಸಾಹಿತಿ ಎಸ್. ಹರೀಶ್ ಅವರಿಗೆ ಘೋಷಿಸಲಾಗಿದೆ. ವಿವಾದಾತ್ಮಕ ಕಾದಂಬರಿ ಮೀಶಾ ಪ್ರಶಸ್ತಿಗೆ ಆಯ್ಕೆಯಾಗಿದೆ.
ವಯಲಾರ್ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಪೆರುಂಬತವಂ ಶ್ರೀಧರನ್ ಅವರು ಪ್ರಶಸ್ತಿಯನ್ನು ಪ್ರಕಟಿಸಿದರು. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಮತ್ತು ಕನೈ ಕುಂಞÂ್ಞ ರಾಮನ್ ವಿನ್ಯಾಸಗೊಳಿಸಿದ ಶಿಲ್ಪವನ್ನು ಒಳಗೊಂಡಿದೆ. ಮೀಶಾ ವಿಭಿನ್ನ ಬರವಣಿಗೆಯ ಶ್ರೇಷ್ಠತೆಯನ್ನು ಹೊಂದಿರುವ ಪುಸ್ತಕ ಎಂದು ಪ್ರಶಸ್ತಿ ತೀರ್ಪುಗಾರರಿಂದ ಗುರುತಿಸಲ್ಪಟ್ಟಿತು.
ಎಸ್ ಹರೀಶ್ ಅವರ ಮೀಷ ಕಾದಂಬರಿ ರಾಜ್ಯದಲ್ಲಿ ಭಾರೀ ವಿವಾದ ಸೃಷ್ಟಿಸಿದೆ. ಹೆಂಗಸರು ಸ್ನಾನ ಮುಗಿಸಿ ದೇವಸ್ಥಾನಕ್ಕೆ ತೆರಳಿ ತಮ್ಮ ಕಾಮವನ್ನು ತೋರಿಸಿಕೊಳ್ಳುತ್ತಾರೆ, ಋತುಸ್ರಾವದ ದಿನಗಳಲ್ಲಿ ಆ ದಿನಗಳಲ್ಲಿ ಸಂಸಾರ ಸಾಧ್ಯವಿಲ್ಲ ಎಂಬಿತ್ಯಾದಿ ಕಾರಣಕ್ಕೆ ಕಾದಂಬರಿಯ ಪಾತ್ರಧಾರಿಗಳ ನಡುವಿನ ಸಂಭಾಷಣೆ ವಿವಾದಾಸ್ಪದವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲೂ ಈ ಕುರಿತು ಭಾರೀ ಚರ್ಚೆಗಳು ನಡೆದಿದ್ದವು.
ಇದೇ ವೇಳೆ ಕೇಂದ್ರ ಸಚಿವ ವಿ.ಮುರಳೀಧರನ್ ಮತ್ತಿತರರು ಮೀಶಾ ಕಾದಂಬರಿಗೆ ಕಳೆದ ವರ್ಷ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿರುವುದನ್ನು ಟೀಕಿಸಿದ್ದರು.ಕೇರಳದಲ್ಲಿ ಮರ್ಯಾದೆ ಇಲ್ಲದ ವ್ಯಕ್ತಿ ಎಂಬುದಕ್ಕೆ ಸಮಾನಾರ್ಥಕ ಪದವಿದ್ದರೆ ಅದು ಪಿಣರಾಯಿ ವಿಜಯನ್ ಎಮದು ಟೀಕಿಸಿದ್ದರು. ಕೇರಳದಲ್ಲಿ ಹಿಂದೂ ಸಮುದಾಯಕ್ಕೆ ನೋವುಂಟು ಮಾಡಿದ ಎಸ್. ಹರೀಶ್ ಅವರ ಮೀಶಾ ಕಾದಂಬರಿಯ ಮೂಲಕ ಪಿಣರಾಯಿ ಮತ್ತು ಅವರ ಸಹೋದ್ಯೋಗಿಗಳು ಯಾವ ಸಂದೇಶವನ್ನು ನೀಡುತ್ತಿದ್ದಾರೆ ಎಂದು ಅವರು ಕೇಳಿದ್ದರು. ವಿವಾದಿತ ಕಾದಂಬರಿಗೆ ವಯಲಾರ್ ಪ್ರಶಸ್ತಿ ಇದೀಗ ಬಂದಿರುವುದು ಮತ್ತಷ್ಟು ವಿವಾದಕ್ಕೆಡೆಯಾಗಲಿದೆ.
ಪ್ರತಿಷ್ಠಿತ ವಯಲಾರ್ ಪ್ರಶಸ್ತಿ ಪ್ರಕಟ: ಹಿಂದೂ ವಿರೋಧಿ ಉಲ್ಲೇಖಗಳ ವಿವಾದಾತ್ಮಕ ಕಾದಂಬರಿ 'ಮೀಶಾ' ಪ್ರಶಸ್ತಿಗೆ ಆಯ್ಕೆ
0
ಅಕ್ಟೋಬರ್ 08, 2022