ಆತ್ಮೀಯ ಹತ್ತಿರದ ಅಪ್ಪುಗೆ
ಡಿಯರೆಸ್ಟ್ ಇಂಟಿಮೆಟ್ ಹಗ್.. ಇದು ಪ್ರೀತಿಯಲ್ಲಿ ಇರುವವರು ಮಾಡುವ ಆಲಿಂಗನ ಆಗಿದೆ. ಪ್ರೇಮಿಗಳು, ಗಂಡ-ಹೆಂಡತಿ ಹೆಚ್ಚಾಗಿ ಈ ಆಲಿಂಗನ ನಡೆಸುತ್ತಾರೆ. ಇಬ್ಬರು ಮುಖಕ್ಕೆ ಮುಖ ತೋರಿಸಿಕೊಂಡು ಗಟ್ಟಿಯಾಗಿ ತಬ್ಬಿಕೊಳ್ಳುವುದು ಆಗಿದೆ. ಈ ರೀತಿಯ ಅಪ್ಪುಗೆಯಲ್ಲಿ ಪ್ರೀತಿ, ರೊಮ್ಯಾನ್ಸ್ ಎಲ್ಲವೂ ಇರುತ್ತದೆ. ಇದರಲ್ಲಿ ಕಣ್ಣಿಗೆ ಕಣ್ಣು ನೋಡುವುದೇ ಅತ್ಯಂತ ಮುಖ್ಯವಾದ ಪಾರ್ಟ್. ಅದರಲ್ಲೂ ಮೊದ ಮೊದಲು ಈ ಹಗ್ ಮಾಡುವವರ ಒಳಗೆ ಒಂದು ರೀತಿಯ ಸ್ಪಾರ್ಕ್ ಓಡಾಡುತ್ತಿರುತ್ತದೆ. ಕೈ ಕೂಡ ಒಂದು ರೊಮ್ಯಾಂಟಿಕ್ ಎನ್ನುವಂತೆ ಬಿಂಬಿಸುತ್ತದೆ. ಈ ಪ್ರೀತಿಯಲ್ಲಿ ಎಷ್ಟು ಖುಷಿ ಇರುತ್ತೆ ಅಂದರೆ ಎಲ್ಲ ನೋವುಗಳು ಮಾಯಾವಾಗುತ್ತದೆ. ಇದರಲ್ಲಿ ನೀವು ಗಮನಿಸಿರಬಹುದು. ನೀವು ಪ್ರೀತಿಯನ್ನು ತಲೆಯಲ್ಲಿ ಇಟ್ಟು ನಿಮ್ಮ ಸಂಗಾತಿಯನ್ನು ಆಲಿಂಗನ ಮಾಡಿದರೆ ಖಂಡಿತವಾಗ್ಲು ಅವರು ನಿಮ್ಮನ್ನು ಆಲಿಂಗನ ಮಾಡುತ್ತಾರೆ. ಯಾಕೆಂದರೆ ಈ ಇಂಟಿಮೇಟ್ ಹಗ್ ಅಂದರೆ ಹಾಗೇ.
ಸೊಂಟದ ಸುತ್ತ ಕೈ ಹಿಡಿದು ಅಪ್ಪುಗೆ!
ಇದು ಕೂಡ ಕಪಲ್ ಗಳಿಗೆ ಸಂಬಂಧಪಟ್ಟದ್ದು. ಕೆಲವರು ಒಂದೊಂದು ರೀತಿಯಲ್ಲಿ ಆಲಿಂಗನ ನಡೆಸುತ್ತಾರೆ. ಒಂದು ವೇಳೆ ನಿಮ್ಮ ಸಂಗಾತಿ ಸೊಂಟದ ಹಿಂದೆ ಆತನ ಕೈ ಕಟ್ಟಿ ನಿಮ್ಮನ್ನು ಹಗ್ ಮಾಡಿದರೆ ಅದು ಅತ್ಯುತ್ತಮ ಹಗ್ ಆಗಲಿದೆ. ಈ ರೀತಿ ಆಲಿಂಗನ ನಡೆಸುವವರು ನಿಜವಾಗಲು ನಿಮ್ಮ ಜೊತೆ ಜೀವನ ಪರ್ಯಂತ ಇರಲು ಬಯಸುತ್ತಾರಂತೆ. ಈ ರೀತಿ ಸೊಂಟದ ಹಿಂದೆ ಕೈ ಕಟ್ಟಿ ಹಗ್ ಮಾಡುವುದು ನಿಮ್ಮನ್ನು ಎಲ್ಲ ಸಮಯದಲ್ಲೂ ಪ್ರೀತಿ ಮತ್ತು ಅತೀ ಕಾಳಜಿಯಿಂದ ನೋಡುವುದು ಆಗಿದೆ. ಈ ರೀತಿ ಪ್ರೀತಿಯಲ್ಲಿ ಇರುವವರಿಗೆ ಮಾತ್ರವಲ್ಲ. ಕುಟುಂಬಸ್ಥರು, ಗೆಳೆಯರು ಕೂಡ ಈ ರೀತಿಯ ಆಲಿಂಗನ ನಡೆಸಬಹುದು. ಈ ಆಲಿಂಗನದಲ್ಲಿ ಪ್ರೀತಿ, ಆಲಿಂಗನ ಖಂಡಿತವಾಗ್ಲು ಇರುತ್ತದೆ.
ಪ್ರೀತಿಯ ಬೆನ್ನಿನ ಅಪ್ಪುಗೆ
ಇದು ಅನಿರೀಕ್ಷಿತ ಅಪ್ಪುಗೆಯಾಗಿದೆ. ಹೌದು, ಇದು ನಿಮ್ಮ ಸಂಗಾತಿ ಅಡುಗೆ ರೂಂ ನಲ್ಲಿ ಇದ್ದರೆ ಅಥವಾ ಏನೋ ನಿಂತು ಮಾಡುತ್ತಿದ್ದರೆ ಇಂಟಿಮೇಟ್ ರೀತಿಯಲ್ಲಿ ಅವರ ಹಿಂದಿನಿಂದ ಆಲಿಂಗನ ನಡೆಸುವುದಾಗಿದೆ. ಇದು ರೊಮ್ಯಾಂಟಿಕ್ ಹಗ್ ಅಂತಲೂ ಕರೆಯುತ್ತಾರೆ. ಈ ಹಗ್ ನಲ್ಲಿ ಖುಷಿ, ಪ್ರೀತಿ, ರೊಮ್ಯಾನ್ಸ್ ಇರುತ್ತದೆ. ನೀವು ಗಮನಿಸಿರಬಹುದು ನಿಮ್ಮ ಸಂಗಾತಿ ಅಡುಗೆ ರೂಂನಲ್ಲಿ ಕೆಲಸ ಮಾಡುತ್ತಿದ್ದಾಗ ನೀವು ಹಿಂದಿನಿಂದ ಹೋಗಿ ಅವರನ್ನು ಹಗ್ ಮಾಡಿದರೆ ಅವರು ನಿರಾಳತೆ ಹೊಂದುತ್ತಾರೆ. ಇಡೀ ದಿನ ಕೆಲಸ ಮಾಡಿದ ಸುಸ್ತು ಒಂದು ಆಲಿಂಗನದಲಿ ಹೋಗಿ ಬಿಡುತ್ತದೆ. ಇನ್ನು ಈ ರೀತಿಯ ಆಲಿಂಗನ ಕೇವಕ ಪ್ರೀತಿಯಲಿ ಇರುವವರು ಮಾಡಬೇಕಿಲ್ಲ. ಕುಟುಂಬಸ್ಥರು, ಗೆಳೆಯರು ನಡೆಸಬಹುದು.
ಶಿಷ್ಟ ಅಪ್ಪುಗೆ!
ಈ ಆಲಿಂಗನ ಹೆಚ್ಚಿನದಾಗಿ ಸಹದ್ಯೋಗಿಗಳು ಹಾಗೂ ಗೆಳೆಯರ ನಡುವೆ ನಡೆಯುತ್ತದೆ. ಈ ಹಗ್ ನಲ್ಲಿ ಗೌರವ, ಪ್ರೀತಿ ಇರುತ್ತದೆ. ಈ ಆಲಿಂಗನವನ್ನು ಪಾರ್ಶ್ವವಾಗಿ ಮಾಡಲಾಗುತ್ತದೆ. ಕೇವಲ ಭಾಗಶಃ ಮೇಲ್ಭಾಗದ ದೇಹ ಆಲಿಂಗನ ನಡೆಸುವವರ ಸಂಪರ್ಕದಲ್ಲಿ ಇರುತ್ತದೆ. ಕೆಳಗಿನ ದೇಹವು ಎಂದಿಗೂ ಸಂಪರ್ಕಕ್ಕೆ ಬರುವುದಿಲ್ಲ. ಅಂದರೆ ಸಂಪೂರ್ಣವಾಗಿ ಆಲಿಂಗನ ನಡೆಸುವುದಿಲ್ಲ. ಕೇವಲ ಗೌರವ ಮತ್ತು ಪ್ರೀತಿ ಸೂಚಕವಾಗಿ ನಡೆಸಲಾಗುತ್ತದೆ. ಇದು ಕೇವಲ ಸಹದ್ಯೋಗಿಗಳಿಗೆ ನಡೆಸುವುದು ಮಾತ್ರವಲ್ಲ ಪ್ರೀತಿ ಪಾತ್ರರಿಗೂ ನೀಡಬಹುದು. ಅಂದರೆ ತಕ್ಷಣ ನಿಮ್ಮ ಪ್ರೀತಿ ಪಾತ್ರರನ್ನು ಭೇಟಿಯಾದರೆ ಈ ರೀತಿಯ ಅಪ್ಪುಗೆ ನೀಡಬಹುದು. ಇನ್ನು ನಿಮ್ಮ ಪ್ರೀತಿ ಪಾತ್ರರು ನಿಮ್ಮಿಂದ ದೂರ ಊರಿಗೆ ಕೆಲಸಕ್ಕೆ ಹೋಗುವಾಗ ಈ ರೀತಿಯ ಅಪ್ಪುಗೆ ನೀಡಬಹುದು.
ಮುದ್ದು ಮುದ್ದಾದ ಅಪ್ಪುಗೆ
ಇದು ಪ್ರೇಮಿಗಳು ಅಥವಾ ಮದುವೆಯಾದವರು ನಡೆಸುವ ಆಲಿಂಗನವಾಗಿದೆ. ಈ ಆಲಿಂಗನದಲ್ಲಿ ರೊಮ್ಯಾನ್ಸ್, ಪ್ರೀತಿ ಇರುತ್ತದೆ. ಈ ಅಪ್ಪುಗೆ ಹೇಗೆ ಇರುತ್ತದೆ ಅಂದರೆ ಹುಡುಗನ ತೊಡೆಯಲ್ಲಿ ಹುಡುಗಿ ಮಲಗಿ ಈ ವೇಳೆ ನಡೆಸುವ ಆಲಿಂಗನವಾಗಿದೆ. ಈ ಗೆಸ್ಚರ್ ಎಂದರೆ ದೈಹಿಕ ಅನ್ಯೋನ್ಯತೆಯನ್ನು ತಮ್ಮ ಸಂಬಂಧದ ಪ್ರಮುಖ ಭಾಗವೆಂದು ಹುಡುಗ ಹುಡುಗಿ ಪರಿಗಣಿಸುತ್ತಾರೆ. ಇದೊಂದು ರೊಮ್ಯಾಂಟಿಕ್ ಹಗ್ ಆಗಿರುತ್ತದೆ. ಇಲ್ಲು ಕೂಡ ಕಣ್ಣು ಸನ್ನೆ, ಹಗ್ ಮಾಡುವ ರೀತಿ ಇಂಟಿಮೇಟ್ ಆಗಿರುತ್ತದೆ.
ಅಪ್ಪುಗೆಯಿಂದ ಸಿಗುವ ಪ್ರಯೋಜನೆಗಳೇನು?
ವೈಜ್ಞಾನಿಕ ಅಧ್ಯಯನಗಳು ಅಪ್ಪುಗೆಯ ಅನೇಕ ಪ್ರಯೋಜನಗಳ ಬಗ್ಗೆ ತಿಳಿಸಿವೆ. ಇದು ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ನೋವು ನಿವಾರಣೆ ಮಾಡುತ್ತದೆ ಮತ್ತು ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಒತ್ತಡದ ಸಂದರ್ಭಗಳಲ್ಲಿ ರಕ್ತದೊತ್ತಡ ಮತ್ತು ಹೃದಯ ಬಡಿತವನ್ನು ಕಡಿಮೆ ಮಾಡುತ್ತದೆ. ತಬ್ಬಿಕೊಳ್ಳುವುದು ರಾತ್ರಿಯ ನಿದ್ರೆಗೆ ಸಹಾಯ ಮಾಡುತ್ತದೆ ಎನ್ನುತ್ತಾರೆ ವೈದ್ಯರು. ಅಪ್ಪಿಕೊಳ್ಳುವಿಕೆಯು ಮೆದುಳಿನಲ್ಲಿ ಆಕ್ಸಿಟೋಸಿನ್ ಅಥವಾ ಉತ್ತಮ ಭಾವನೆಯ ರಾಸಾಯನಿಕದ ಮಟ್ಟವನ್ನು ಹೆಚ್ಚಿಸುತ್ತದೆ, ಅದು ನಮ್ಮನ್ನು ಸಂತೋಷವಾಗಿರಲು ಮತ್ತು ಶಾಂತವಾಗಿರಲು ಸಹಾಯ ಮಾಡುತ್ತದೆ.