ಬದಿಯಡ್ಕ: ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲಾ ಕಲೋತ್ಸವ ಬುಧವಾರ ಮತ್ತು ಗುರುವಾರ ನಡೆಯುತ್ತಿದ್ದು, ಕಾರ್ಯಕ್ರಮವನ್ನು ಬುಧವಾರ ಗ್ರಾಮ ಪಂಚಾಯತಿ ಸದಸ್ಯ ಶ್ಯಾಮ್ ಪ್ರಸಾದ್ ಮಾನ್ಯ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರದರ್ಶಿಸುವ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಶಾಲಾ ಮಟ್ಟದಲ್ಲಿ ಮಿಂಚಿ ಜಿಲ್ಲಾ ಮಟ್ಟ, ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತರಬೇಕೆಂದು ಹೇಳಿದರು.
ರಕ್ಷಕ_ಶಿಕ್ಷಕ ಸಂಘದ ಅಧ್ಯಕ್ಷ ಅನ್ವರ್ ಓಜೋನ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯನಿ ಮಿನಿ ಟೀಚರ್, ಹೈಯರ್ ಸೆಕೆಂಡರಿ ವಿಭಾಗದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಚಾತುಕುಟ್ಟಿ, ನೌಕರ ಸಂಘದ ಕಾರ್ಯದರ್ಶಿ ಕಾರ್ತಿಕ ಟೀಚರ್, ಹಿರಿಯ ಅದ್ಯಾಪಕಿ ಮಾಲತಿ ಟೀಚರ್, ಶ್ರೀಕೃಷ್ಣ ಮಾಸ್ತರ್, ಪ್ರಭಾವತಿ ಕೆದಿಲಾಯ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮ ಸಂಚಾಲಕಿ ವನಜ ಟೀಚರ್, ದಿವ್ಯಾ ಟೀಚರ್, ಶ್ರೀಜ ಟೀಚರ್, ನಿರಂಜನ್ ರೈ ಪೆರಡಾಲ,ನಾರಾಯಣ ಆಶ್ರ ಉಪಸ್ಥಿತರಿದ್ದರು. ಪ್ರಾಂಶುಪಾಲ ಮಾಧವನ್ ಮಾಸ್ತರ್ ಸ್ವಾಗತಿಸಿ, ಶ್ರೀನಿವಾಸ ಮಾಸ್ತರ್ ವಂದಿಸಿದರು. ನಾಲ್ಕು ವೇದಿಕೆಯಲ್ಲಿ ವಿವಿಧ ಸಾಹಿತ್ಯ-ಸಾಂಸ್ಕøತಿಕ ಸ್ಪರ್ಧೆಗಳು ಎರಡು ದಿನಗಳ ಕಾಲ ನಡೆಯುತ್ತಿದೆ.
ನವಜೀವನ ಹೈಯರ್ ಸೆಕೆಂಡರಿ ಶಾಲಾ ಕಲೋತ್ಸವಕ್ಕೆ ಚಾಲನೆ
0
ಅಕ್ಟೋಬರ್ 12, 2022
Tags