ಮುಳ್ಳೇರಿಯ: ಕೋಟೂರು ಶ್ರೀ ಕಾರ್ತಿಕೇಯ ಸೇವಾ ಭಜನಾ ಮಂದಿರದ ಜೀರ್ಣೋದ್ಧಾರ ಕಾರ್ಯಕ್ರಮದ ಅಂಗವಾಗಿ ಪುನರ್ ಪ್ರತಿμÁ್ಠ ಮಹೋತ್ಸವದ ಆಚರಣಾ ಸಮಿತಿ ರೂಪೀಕರಣ ಸಭೆ ಕೋಟೂರು ಕೆ ಎ ಯಲ್ ಪಿ ಶಾಲೆಯಲ್ಲಿ ಜರಗಿತು. ಖ್ಯಾತ ಉದ್ಯಮಿ ವಸಂತ ಪೈ ಬದಿಯಡ್ಕ ಉದ್ಘಾಟಿಸಿದರು.
ಗೋವಿಂದಬಳ್ಳಮೂಲೆ, ಸೋಮಶೇಖರ ಬಳ್ಳುಳ್ಳಾಯ, ಗೋಪಾಲನ್ ಮಣಿಯಾಣಿ ಕಕ್ಕೋಲ್, ಟಿ ಬಾಲಕೃಷ್ಣನ್, ನರಸಿಂಹ ಭಟ್ ಪಾತನಡ್ಕ , ಪ್ರಭಾಕರ ಎರಿಂಚೇರಿ, ವಿದ್ಯಾ ರವೀಂದ್ರನ್, ಶ್ಯಾಮಲಾ ಅಚ್ಯುತನ್, ಸುಕುಮಾರಿ ಟೀಚರ್ ಮತ್ತು ಗೀತಾ ಗೋಪಾಲನ್ ಮಾತನಾಡಿದರು.
ಪ್ರಕಾಶ್ ಸಿ ಎ ಸ್ವಾಗತಿಸಿ, ಶಿವಶಂಕರನ್ ವಂದಿಸಿದರು. ಪದಾಧಿಕಾರಿಗಳಾಗಿ ವಸಂತ ಪೈ ಬದಿಯಡ್ಕ (ಅಧ್ಯಕ್ಷರು), ಕೆ ಗೋಪಾಲನ್ ಕೋಟೂರು (ಕಾರ್ಯಾಧ್ಯಕ್ಷರು), ಪ್ರಕಾಶ್ ಸಿ ಎ (ಸಂಚಾಲಕರು) ಮತ್ತು ಮೋಹನನ್ (ಖಜಾಂಚಿ) ಆಯ್ಕೆಯಾದರು.
ಕೋಟೂರು ಶ್ರೀ ಕಾರ್ತಿಕೇಯ ಸೇವಾ ಭಜನಾ ಮಂದಿರ ಪುನರ್ ಪ್ರತಿμÁ್ಠ ಮಹೋತ್ಸವದ ಆಚರಣಾ ಸಮಿತಿ ರೂಪೀಕರಣ ಸಭೆ
0
ಅಕ್ಟೋಬರ್ 05, 2022
Tags