ಪೆರ್ಲ: ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಅಮಲು ಮುಕ್ತ ಕೇರಳ ಕಾರ್ಯಕ್ರಮಕ್ಕೆ ಪೂರಕವಾಗಿ ಮಾದಕ ದ್ರವ್ಯ ವಿರೋಧಿ ಜನ ಜಾಗೃತಿ ಸಭೆ ಶೇಣಿ ಶ್ರೀಶಾರದಾಂಬ ಎಯುಪಿ ಶಾಲೆಯಲ್ಲಿ ಜರಗಿತು. ಶಾಲಾ ರಕ್ಷಕ ಶಿಕ್ಷಕ ಸಂಘದ ಸಹಭಾಗಿತ್ವದಲ್ಲಿ ನಡೆದ ಸಭೆಯಲ್ಲಿ ಅಮಲು ವಿರುದ್ಧ ಹೋರಾಟಕ್ಕೆ ಮುಖ್ಯ ಮಂತ್ರಿ ಹಾಗೂ ಶಿಕ್ಷಣ ಸಚಿವರು ನೀಡಿದ ಕರೆಯ ವಿಡಿಯೊ ಪ್ರದರ್ಶಿಸಲಾಯಿತು. ಬಳಿಕ ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ನಾಯಕ್ ಶೇಣಿ ಮಾತನಾಡಿದರು. ರಕ್ಷಕರಿಗೆ ಶ್ರೀಧರ ಮಾಸ್ತರ್, ತಸ್ಲಿಮಾ ಟೀಚರ್, ಪ್ರಭಾಕರ ಮಾಸ್ತರ್ ಮಾದಕ ವ್ಯಸನ ಬಗ್ಗೆ ಜಾಗೃತಿ ಮೂಡಿಸುವ ತರಗತಿ ನೀಡಿದರು. ಬ್ಲಾಕ್ ಪಂ.ಸದಸ್ಯ ಅನಿಲ್ ಕುಮಾರ್, ಶಾಲಾ ಮಾತೃ ಸಂಘದ ಅಧ್ಯಕ್ಷೆ ಶಶಿಕಲಾ, ಹಿರಿಯ ಶಿಕ್ಷಕಿ ಹೈಮಾವತೀ ಮೊದಲಾದವರು ಉಪಸ್ಥಿತರಿದ್ದರು.
ಶೇಣಿ ಶಾಲೆಯಲ್ಲಿ "ಅಮಲು ಮುಕ್ತ ಕೇರಳ" ಜನ ಜಾಗೃತಿ ಸಭೆ
0
ಅಕ್ಟೋಬರ್ 08, 2022
Tags