ಬೆಂಗಳೂರು: ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯದ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಾಳೆಯಿಂದ(ಅ.29)ರಿಂದ ನ.27 ರವರೆಗೆ ಒಂದು ತಿಂಗಳ ಕನ್ನಡ ಪುಸ್ತಕ ಹಬ್ಬ-2022 ಆಯೋಜಿಸಲಾಗಿದೆ. ನಾಳೆ ಬೆಳಿಗ್ಗೆ 11 ಕ್ಕೆ ಚಾಮರಾಜಪೇಟೆಯ ಕೇಶವಶಿಲ್ಪ ಸಭಾಂಗಣದಲ್ಲಿ ಸಮಾರಂಭ ಉದ್ಘಾಟನೆ ನಡೆತಯಲಿದ್ದು, ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಪತಿ ಡಾ.ನಿರಂಜನ ವಾನಳ್ಳಿ ಉದ್ಘಾಟಿಸುವರು. ಖ್ಯಾತ ಅಂಕಣಕಾರ, ಕಥೆಗಾರ ಪ್ರೊ.ಪ್ರೇಮಶೇಖರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಮುಖರು ಉಪಸ್ಥಿತರಿರುವರು.
ಒಂದು ತಿಂಗಳ ಪುಸ್ತಕ ಹಬ್ಬದಲ್ಲಿ ಶೇ.50 ರ ರಿಯಾಯಿತಿ ದರದಲ್ಲಿ ಪುಸ್ತಕಗಳು ಲಭಿಸಲಿದ್ದು, ಪ್ರತಿನಿತ್ಯ ಬೆಳಿಗ್ಗೆ 9 ರಿಂದ ಸಂಜೆ 8ರ ವರೆಗೆ ಪುಸ್ತಕ ಪ್ರದರ್ಶನ-ಮಾರಾಟ ಮಳಿಗೆ ಕೇಶವಶಿಲ್ಪದ ಸಭಾಂಗಣದಲ್ಲಿ ಮುಕ್ತವಾಗಿರುತ್ತದೆ ಎಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪುಸ್ತಕ ಹಬ್ಬದ ವಿಶೇಷೆಯಾಗಿ ಪ್ರತಿ ಶನಿವಾರ ಹಾಗೂ ಭಾನುವಾರ ವಿಶೇಷ ಉಪನ್ಯಾಸ-ಅವಲೋಕನಗಳು, ಕೃತಿಕಾರರೊಂದಿಗೆ ಸಂವಾದ ಮುಂತಾದ ಕಾರ್ಯಕ್ರಮಗಳೂ ನಡೆಯಲಿದೆ.
ನಾಳೆಯಿಂದ ರಾಷ್ಟ್ರೋತ್ಥಾನ ಸಾಹಿತ್ಯ ಕನ್ನಡ ಪುಸ್ತಕ ಹಬ್ಬ: ರಿಯಾಯಿತಿ ದರದಲ್ಲಿ ಪುಸ್ತಕ ಜಾತ್ರೆ
0
ಅಕ್ಟೋಬರ್ 28, 2022