ತಿರುವನಂತಪುರ: ಪಾಪ್ಯುಲರ್ ಫ್ರಂಟ್ ನಾಯಕರ ಆಸ್ತಿ ಮಾಹಿತಿ ನೀಡಲು ಕಂದಾಯ ಇಲಾಖೆ ಸಮಯವನ್ನು ವಿಸ್ತರಿಸಿದೆ.
ಕಾನೂನು ಪ್ರಕ್ರಿಯೆಯ ಭಾಗವಾಗಿ ಎನ್.ಟಿ.ಎ ಇಲಾಖೆಯಿಂದ ಮಾಹಿತಿ ಕೇಳಿದೆ. ಆದರೆ ಡಿಜಿಟಲೀಕರಣ ಪೂರ್ಣಗೊಳ್ಳದ ಕಾರಣ ಕಂದಾಯ ಇಲಾಖೆ ಹೆಚ್ಚಿನ ಕಾಲಾವಕಾಶ ಕೇಳಿದೆ.
ಭಯೋತ್ಪಾದಕ ಶಕ್ತಿಗಳನ್ನು ಗುರುತಿಸಲು, ಪ್ರತ್ಯೇಕಿಸಲು ಮತ್ತು ನ್ಯಾಯದ ಕಟಕಟಗೇರಿಸಲು ಕೇಂದ್ರೀಯ ಸಂಸ್ಥೆಗಳು ಕೆಲಸ ಮಾಡುತ್ತವೆ. ಕಳೆದ ಕೆಲ ದಿನಗಳಿಂದ ನಡೆದ ದಾಳಿಯ ಮುಂದುವರಿದ ಭಾಗವಾಗಿ ಎನ್‍ಐಎ ಪಾಪ್ಯುಲರ್ ಫ್ರಂಟ್ ಮುಖಂಡರ ಆಸ್ತಿ ಮಾಹಿತಿ ಕೇಳಿದೆ. ಆರಂಭದಲ್ಲಿ ವರದಿ ನೀಡುವಂತೆ ಪೆÇಲೀಸರಿಗೆ ತಿಳಿಸಲಾಗಿತ್ತಾದರೂ ಅವರು ಸಹಕರಿಸದೇ ಇದ್ದಾಗ ಕಂದಾಯ ಇಲಾಖೆಯ ನೆರವು ಕೋರಲಾಗಿತ್ತು. ಒಂದು ವಾರದೊಳಗೆ ಮಾಹಿತಿ ವರ್ಗಾಯಿಸಬೇಕು ಎಂಬ ಬೇಡಿಕೆ ಇತ್ತು. ಆದರೆ 5 ದಿನಗಳ ನಂತರ ಹೆಚ್ಚಿನ ಕಾಲಾವಕಾಶ ಕೋರಲಾಯಿತು.
ರಜಾದಿನಗಳಲ್ಲಿ ಡೇಟಾವನ್ನು ಸಂಗ್ರಹಿಸಲು ಸಾಧ್ಯವಾಗಲಿಲ್ಲ. ಮತ್ತು ಡಿಜಿಟಲೀಕರಣ ಪೂರ್ಣಗೊಳ್ಳದ ಕಾರಣ, ಕಂದಾಯ ಇಲಾಖೆ ಆರೋಪಿಗಳ ಹೆಸರು ಪತ್ತೆ ಹಚ್ಚಲು ಹೆಚ್ಚಿನ ಸಮಯ ಬಯಸಿದೆ. ಆದರೆ ಎಷ್ಟು ದಿನಗಳು ಎಂಬುದನ್ನು ತಿಳಿಸಿಲ್ಲ. ಭಯೋತ್ಪಾದಕರು ತಮ್ಮ ಆಸ್ತಿಯನ್ನು ಮಾರಾಟ ಮಾಡಿ ಬೇರೆ ಹೆಸರಿಗೆ ಬದಲಾಯಿಸಿಕೊಂಡಿರುವುದು ಇಲಾಖೆಗಳ ಸಡಿಲಿಕೆ ಹಿನ್ನಡೆಯಾಗಿದೆ. ಪಾಪ್ಯುಲರ್ ಫ್ರಂಟ್ ಗೆ ನೆರವಾಗುವ ಸರಕಾರದ ನಿಲುವಿನ ಮೇಲೆಯೇ ಇಲಾಖೆಗಳೂ ಸಾಗುತ್ತಿವೆ ಎಂಬುದು ಪೆÇಲೀಸ್ ಹಾಗೂ ಕಂದಾಯ ಇಲಾಖೆಯ ನಿಲುವಿನಿಂದ ಸ್ಪಷ್ಟವಾಗಿದೆ.
ಡಿಜಿಟಲೀಕರಣ ಪೂರ್ಣಗೊಂಡಿಲ್ಲ: ಮತ್ತಷ್ಟು ಸಮಯ ವಿಸ್ತರಣೆ: ಪಾಪ್ಯುಲರ್ ಫ್ರಂಟ್‍ಗೆ ಸಹಾಯ ಮಾಡುವ ನಿಲುವು ಹೊಂದಿದ ಸರ್ಕಾರ
0
ಅಕ್ಟೋಬರ್ 05, 2022